ರಾಣೆಬೇನ್ನೂರು: ತಾಲೂಕಿನಲ್ಲಿರುವ ಕೃಷ್ಣಮೃಗ ಅಭಯಾರಣ್ಯಕ್ಕೆ ಹೊಸದಾಗಿ ಸಫಾರಿ ವಾಹನ ಸೇರ್ಪಡೆಯಾಗಿದ್ದು, ಪ್ರವಾಸಿಗರಿಗೆ ಸಫಾರಿ ಅನುಭವ ನೀಡಲು ಅರಣ್ಯ ಇಲಾಖೆ ಮುಂದಾಗಿದೆ.
ಹೌದು ರಾಣೆಬೇನ್ನೂರು ತಾಲೂಕಿನಲ್ಲಿ ಇರುವ ಅರಣ್ಯ ಸುಮಾರು 119 ಚ.ಕಿಮೀ ಹೊಂದಿದ್ದು ಅರಣ್ಯದಲ್ಲಿ, ಕೃಷ್ಣಮೃಗ, ಮೊಲ, ನವಿಲು, ಕಾಡುಹಂದಿ, ಬ್ಲಾಕ್ ಬಕ್, ಸೇರಿದಂತೆ ನೂರಾರು ಪ್ರಾಣಿಗಳು, ಪಕ್ಷಿಗಳು ಇಲ್ಲಿವೆ. ಈ ಹಿನ್ನೆಲೆ ಹೊರಗಡೆಯಿಂದ ಬರುವಂತಹ ಪ್ರವಾಸಿಗರಿಗೆ ಸಫಾರಿ ಮಾಡಲು ಅನುಕೂಲಕರವಾದ ವಾಹನ ಇರಲಿಲ್ಲ. ಇದರಿಂದ ಪ್ರವಾಸಿಗರಿಗೆ ಅಡತಡೆ ಉಂಟಾಗಿತ್ತು ಇದನ್ನು ಮನಗಂಡ ಸರ್ಕಾರ ಹಾಗೂ ಶಾಸಕರ ಶ್ರಮದಿಂದ ಸಫಾರಿ ವಾಹನವು ಅಭಯಾರಣ್ಯಕ್ಕೆ ಬಂದಿದೆ.
RFO ಲಿಂಗಾರೆಡ್ಡಿ ಮಾತನಾಡಿ, ರಾಜ್ಯದ ವಿವಿಧ ಕಡೆಯಿಂದ ಬರುವ ಪ್ರವಾಸಿಗರಿಗೆ ಈ ಸಫಾರಿ ವಾಹನದ ಮೂಲಕ ಕೃಷ್ಣಮೃಗ ಅಭಯಾರಣ್ಯ ಸುತ್ತಾಡಿ ನೋಡಲು ಅನುಕೂಲವಾಗುವಂತೆ ಕೈಗೊಳ್ಳಲಾಗುವುದು. ಅಲ್ಲದೆ ಸರ್ಕಾರದ ಆದೇಶ ಮೂಲಕ ದರ ನಿಗದಿ ಪಡಿಸಿ ಮುಂದಿನ ದಿನಗಳಲ್ಲಿ ಸಫಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ