ರಾಣೆಬೇನ್ನೂರು: ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಲಾರಿ ಚಾಲಕನ ಎದೆಯಲ್ಲಿ ಸಿಕ್ಕಿಕೊಂಡು ಲಾರಿ ಚಾಲಕ ಪರದಾಟ ನಡೆದಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದ ಬಳಿ ನಡೆದಿದೆ.
ಶಿವಾನಂದ ಬಡಗಿ ಎಂಬ ಲಾರಿ ಚಾಲಕನ ಎದೆಯಲ್ಲಿ ಕಬ್ಬಿಣದ ಪೈಪ್ ಸಿಕ್ಕಿಹಾಕಿಕೊಂಡು ಪರದಾಟ ನಡೆಸಿದ್ದಾನೆ.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ವೇಳೆ ಹೂಲಿಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ. ಚಾಲಕ ಸರ್ವೀಸ್ ರಸ್ತೆಗೆ ಲಾರಿ ಸಮೇತ ಬಿದ್ದಾಗ ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚಾಲಕನ ಎದೆಗೆ ಹೊಕ್ಕಿದೆ. ವಿಷಯ ತಿಳಿದು ಹೈವೇ ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪೈಪ್ ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಚಾಲಕ ಎದೆಗೆ ಹೊಕ್ಕ ಕಬ್ಬಿಣದ ಪೈಪ್ ನಿಂದ ರಕ್ತ ಸುರಿಯುತ್ತಿದ್ದರೂ ದಿಕ್ಕು ತೋಚದಂತೆ ಕುಳಿತಿದ್ದಾನೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿದ್ದ ಸರ್ವೀಸ್ ರಸ್ತೆಯ ಕಬ್ಬಿಣದ ಸ್ವಲ್ಪ ಪ್ರಮಾಣದ ಪೈಪ್‌ನ್ನು ಕತ್ತರಿಸಿ, ಎದೆಯಲ್ಲಿ ಸಿಕ್ಕಿಕೊಂಡ ಪೈಪ್‌ನೊಂದಿಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಹೈವೇ ಅಂಬ್ಯುಲೆನ್ಸ್ ವಾಹನದ ಮೂಲಕ ಲಾರಿ ಚಾಲಕನನ್ನು ದಾವಣಗೆರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಎದೆಯಲ್ಲಿ ಕಬ್ಬಿಣದ ಪೈಪ್ ಹೊಕ್ಕು ರಕ್ತ ಸುರಿಯುತ್ತಿದ್ದರೂ ಧೈರ್ಯದಿಂದ ಕುಳಿತಿರುವ ಲಾರಿ ಚಾಲಕನ ಧೈರ್ಯವನ್ನು ಕಂಡು ಸ್ಥಳೀಯರು ಚಾಲಕನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”