16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಒಳ ಮೀಸಲಾತಿಗೆ ಆಗ್ರಹಿಸಿ ನಗರದಲ್ಲಿ ರಾಜ್ಯ ಮಾದಿಗರ ಸಂಘಟನೆ ಬೃಹತ್ ಪ್ರತಿಭಟನೆ.

ರಾಣೆಬೇನ್ನೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಗಳಿಗೆ ನೀಡಿದೆ. ಈ ತೀರ್ಪನ್ನು ರಾಜ್ಯ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ರಾಣೆಬೇನ್ನೂರು ನಗರದಲ್ಲಿ ರಾಜ್ಯ ಮಾದಿಗ ಸಂಘಟನೆ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸಂಗಮ ವೃತ್ತದಿಂದ ಆರಂಭವಾದ ಪ್ರತಿಭಟನೆ ಎಂ.ಜಿ.ರಸ್ತೆ, ಕುರಬಗೇರಿ ರಸ್ತೆ, ಪಿಬಿ ರಸ್ತೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಸರ್ಕಾರಕ್ಕೆ ಆಗ್ರಹಿಸಿದರು.

ಮುಖಂಡರಾದ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಮನೆ ಮಾಡಿರುವ ಅಸಮಾನತೆ ಆತಂಕಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ತೆರೆ ಎಳೆದಿದೆ. ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕು.

ಹಿಂದುಳಿದ ಜಾತಿಗಳಿಗೆ ಅನ್ವಯಿಸಿದ ಕೆನೆಪದರ ಮಾನದಂಡಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವ ಮಾನದಂಡಗಳು ಭಿನ್ನವಾಗಿರಬೇಕೆಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಜೊತೆಗೆ ಕೆನೆಪದರ ತಳಕು ಹಾಕಿ ವಿಷಯಾಂತರ ಮಾಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಿಬೇಕು ಎಂದು ಆಗ್ರಹ ಮಾಡಿದರು.

ನಂತರ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ‌ಮನವಿ ಸಲ್ಲಿಸಿದರು.

 

ಪ್ರತಿಭಟನೆ ಸಮಯದಲ್ಲಿ ಮುಖಂಡರಾದ ನೀಲಕಂಠಪ್ಪ ಕುಸಗೂರ, ಪ್ರಕಾಶ ಪೂಜಾರ, ಮೈಲಪ್ಪ ದಾಸಪ್ಪನವರ, ಹೊನ್ನಪ್ಪ ಹೊನ್ನಾಪುರ, ವಿಜಯ ಕೆಳಗಿಮನಿಗ, ಬಿ.ಡಿ. ಸಾವಕ್ಕಳವರ, ಮಲ್ಲೇಶಪ್ಪ ಮದ್ಲೇರ, ಮಂಜುಳಾ ಮಾದರ, ಪಾರವ್ವ ಹರಿಜನ, ಶೇಖವ್ವ ಚಳಗೇರಿ, ಹೊನ್ನಪ್ಪ ಸಿದ್ದಪ್ಪನವರ, ಶೇಖಪ್ಪ ಕಲ್ಲೇಜರ, ಕೆ.ಆರ್.ಉಮೇಶ, ಶಶಿಧರ ಚಲವಾದಿ, ರಮೇಶ ಐರಣಿ, ಮಲ್ಲೇಶ ಕಜ್ಜರಿ, ಧರ್ಮಣ್ಣ ಅಂತರ ಹಳ್ಳಿ, ಮಂಜಣ್ಣ ಗಂಗಾಪುರ, ದುರ್ಗಪ್ಪ ಹಿಲದಹಳ್ಳಿ, ನೀಲಕಂಠಪ್ಪ ಕರೂರ ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!