ರಾಣೆಬೇನ್ನೂರು: ತಾಲೂಕಿನ ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯ ಮಾಳನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಇಸ್ಪೀಟು ಆಟವಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಹತ್ತು ಜನರ ಮೇಲೆ ಪ್ರಕರಣ ದಾಖಲಿಸಿ ಸುಮಾರು 21500 ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ಇವರು ಗ್ರಾಮದ ರಮೇಶ್ ಹಿರೇಬಿದರಿ ಎಂಬುವರು ಜಮೀನಿನ ಬಂಡಿ ದಾರಿಯಲ್ಲಿ ತಮ್ಮ ಲಾಭಕ್ಕಾಗಿ ಇಸ್ಪೀಟು ಆಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಹಲಗೇರಿ ಠಾಣೆಯ ಪಿಎಸ್ಐ ಪರಶುರಾಮ ಲಮಾಣಿ ದಾಳಿ ಮಾಡಿದ್ದಾರೆ.
ದಾಳಿ ಸಮಯದಲ್ಲಿ ತುಮ್ಮಿನಕಟ್ಟಿ ಗ್ರಾಮದ ಸಾಧಿಕ್ ವೀರಾಪುರ, ಮಂಜುನಾಥ ಹೊಸ ದುರ್ಗ, ಬಸವರಾಜ ಗೊಗ್ಗದ, ಮಾರುತಿ ಬಣಗಾರ, ಪ್ರಭಾಕರ್ ಡಿಎಸ್, ಹಾಲೇಶ ಜಾಧವ ಹಾಗೂ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಆಂಜಿನಪ್ಪ ಸಣ್ಣಬಸಪ್ಪನವರ, ಬಸವರಾಜ ದೊಡ್ಡಮನಿ, ಕೆ.ಕೆ.ಆಂಜನೇಯ, ಶಶಿ ಗುದ್ಲೆಪ್ಪನವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಇಬ್ಬರು ಓಡಿ ಹೋಗಿದ್ದಾರೆ ಎನ್ನಲಾಗಿದೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ