ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ

ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!

ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ನವದುರ್ಗಿಯರ ವೈಭವದಲ್ಲಿ ಎದ್ದು ಬಂದ “ರಾಣೆಬೇನ್ನೂರ ಕಾ ರಾಜಾ”

ರಾಣೆಬೇನ್ನೂರು: ಸಮಾಜದಲ್ಲಿ ಭಕ್ತಿಯ ಜತೆಗೆ ಮಹಿಳೆಯರ ಶಕ್ತಿಯು ಸಹ ತಿಳಿಯಬೇಕು ಎಂದು ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶನಂದ ಮಹಾರಾಜರು ಹೇಳಿದರು.

ನಗರದ ನಗರಸಭಾ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ರಾಣೆಬೇನ್ನೂರು ಕಾ ರಾಜಾ ಗಣಪತಿಯ “ನವದುರ್ಗಿಯರ ವೈಭವ” ಗಣೇಶ ಮಂಟಪ ಹಾಗೂ ಸಾಧಕಿಯ ಮಹಿಳೆಯರ ಕುರಿತು ರಚಿಸಿರುವ  “ಪ್ರಾ:ತ ಸ್ಮರಾಮಿ” ಎಂಬ  ಗ್ರಂಥ ಬಿಡುಗಡೆ ‌ಮಾಡಿ ಮಾತನಾಡಿದರು.

ಸದ್ಯ ರಾಜ್ಯ ಹಾಗೂ ದೇಶದಲ್ಲಿ ಗಣೇಶ ಉತ್ಸವನ್ನು ಡ್ಯಾನ್ಸ್, ಹಾಡುಗಳು, ಕುಣಿತದ ಮೂಲಕ ಅಂತ್ಯವಾಗುತ್ತಿದೆ. ಆದರೆ  ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಮಾರ್ಪಾಡಿಸಿ ಅದನ್ನು ಹಬ್ಬವನ್ನಾಗಿ ಜನರಿಗೆ ತೋರಿಸಿದ ಮಂಡಳಿ ವಂದೇ ಮಾತರಂ ಸ್ವಯಂ ಸೇವಾ ಸಂಘ. ಇಂತಹ ಸಂಘ ಪ್ರತಿ ವರ್ಷವೂ ವಿಶೇಷವಾಗಿ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ದೇಶದ ಜನರಿಗೆ ನಾವು ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ನಾವು ಎಲ್ಲರೂ ಸೇರಿ ಇಂತಹ ವಿನೂತನ ಕಾರ್ಯಕ್ರಮ ಮೂಲಕ ರಾಷ್ಟ್ರದ ಪ್ರಜ್ಞೆ ಬಗ್ಗೆ ತಿಳಿಸಬೇಕು ಎಂದರು.

ಎಂ.ಎಸ್.ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ರಾಣೆಬೇನ್ನೂರು ನಗರದಿಂದ ಎಂಬುದು ವಿಶೇಷ. ಅಂದು ರಾಣೆಬೇನ್ನೂರು ನಗರದಲ್ಲಿ 1925-31 ರಲ್ಲಿ ನಗರದ ಮಾರ್ಕೆಟ್ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಪ್ರತಿಷ್ಠಾಪನೆ ಮಾಡಿದರು.  ಅದರಂತೆ ರಾಣೆಬೇನ್ನೂರು ನಗರದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಘ ಸದಸ್ಯರು ಪ್ರತಿ ವರ್ಷವೂ ವಿನೂತನ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.

ಈ ಬಾರಿ ರಾಣೆಬೇನ್ನೂರು ನಗರದಲ್ಲಿ ವಿಶೇಷವಾಗಿ “ಪ್ರಾ:ತ ಸ್ಮರಾಮಿ” ಎಂಬ ಗ್ರಂಥ ರಚನೆ ಮಾಡುವ ರಾಜ್ಯ ಸೇರಿದಂತೆ ಜಿಲ್ಲೆಯ 37 ಮಹಿಳೆಯರ ಅವರ  ಸಾಧನೆ ಬಗ್ಗೆ ಚಿತ್ರಿಸಿ ಅವರ ಜೀವನ  ವಿವರಿಸಲಾಗಿದೆ.

ಇದನ್ನು ಯಾಕೆ ಮಾಡಲಾಗಿದೆ ಎಂದರೆ ಭಾರತದಲ್ಲಿ ಮಹಿಳೆಯರಿಗೆ ‌ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಅಂತಹ ಮಹಿಳೆಯರ ಮೇಲೆ ದಿನ ನಿತ್ಯ ಅತ್ಯಾಚಾರ, ಶೋಷಣೆ ನಡೆಯುತ್ತಿರುವದು ನೋಡಿದರೆ ಸಮಾಜದಲ್ಲಿ ತೆಲೆ ತಗ್ಗಿಸುವ ಕೆಲಸವಾಗಿದೆ. ಇಂತಹ ಸಮಯದಲ್ಲಿ ನಾವು ಮಹಿಳೆಯರಿಗೆ ಧೈರ್ಯ, ಸ್ಥೈರ್ಯ ತುಂಬಬೇಕು ಎಂಬ ಉದ್ದೇಶದಿಂದ ನವದುರ್ಗಿಯರ ವೈಭವದ ಮ‌ೂಲಕ ಮಹಿಳೆಯರ ಸಬಲತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

 

ನಗರದ ವಿವೇಕಾನಂದ ಆಶ್ರಮದ ಪ್ರಕಾಶನಂದ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಪ್ರಕಾಶ ಬುರಡಿಕಟ್ಟಿ, ಲೇಖಕರಾದ ಪ್ರಮೋದ್ ನಲವಾಗಲ, ಪ್ರೇಮಕುಮಾರ ಬಿದರಕಟ್ಟಿ, ಅಜಯ್ ಮಠದ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!