ರಾಣೆಬೇನ್ನೂರ: ತಾಲೂಕಿನ ಬೇಲೂರು ಗ್ರಾಮ ಪಂಚಾಯತ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ತೆರವಾಗಿದ್ದ ಸ್ಥಾನಕ್ಕೆ, ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಸುಧಾ ನಿಂಗಪ್ಪ ಕಾಟೇನಹಳ್ಳಿ ಅಧ್ಯಕ್ಷರಾಗಿ, ಕುಮಾರ ಹುಲಗಪ್ಪ ವಡ್ಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಎಂದು ಜಿಲ್ಲಾಡಳಿತ ಮತ್ತು ಸರ್ಕಾರ ಮೀಸಲಾತಿ ನಿಗಧಿಪಡಿಸಿ ಆದೇಶ ಹೊರಡಿಸಿತ್ತು.
ಒಟ್ಟು ೧೭ ಜನ ಸದಸ್ಯ ಬಲವನ್ನು ಹೊಂದಿರುವ ಈ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಠ ಜಾತಿಯ ಗ್ರಾ.ಪಂ ಸದಸ್ಯರಾದ ಸುಧಾ ನಿಂಗಪ್ಪ ಕಾಟೇನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ, ಕುಮಾರ ಹುಲಗಪ್ಪ ವಡ್ಡರ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಸುಧಾ ನಿಂಗಪ್ಪ ಕಾಟೇನಹಳ್ಳಿ ಅಧ್ಯಕ್ಷರಾಗಿ, ಕುಮಾರ ಹುಲುಗಪ್ಪ ವಡ್ಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪರಮೇಶಪ್ಪ ತಿಳಿಸಿದರು.
ಮುಖಂಡರಾದ ಫಕ್ಕಿರಪ್ಪ ಬ ಹಾವನೂರು, ಕುಮಾರ ಚನ್ನಳ್ಳಿ, ಮಂಜು ಕರಲಿಂಗಪ್ಪನವರ, ಶಿವಪ್ಪ ಮುದ್ದಿ, ಪುಟ್ಟಪ್ಪ ನಡುವಿನಮನಿ, ಬಸಪ್ಪ ಪೂಜಾರ, ತಮ್ಮಣ್ಣ ಪೂಗಟ್ಟಿ, ತಿಮ್ಮನಗೌಡ್ರ ಪಾಟೀಲ, ಬಸವರಾಜ ಚಳಗೇರಿ, ಲಕ್ಷ್ಮಣ ಶಿ ಲಮಾಣಿ ಹಾಗೂ ಗ್ರಾಮ ಪಂಚಾಯತ ಸದಸ್ಯರು ನೂತನ ಅಧ್ಯಕ್ಷ/ಉಪಾಧ್ಯಕ್ಷರನ್ನು ಅಭಿನಂದಿಸಿದರು.
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.