ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ

ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!

ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ಪ್ರಾಸಿಕ್ಯೂಷನ್‌ಗೆ ಅನುಮತಿ ಖಂಡಿಸಿ: ಅಹಿಂದ ಸಮುದಾಯಗಳ ಒಕ್ಕೂಟದ ಪ್ರತಿಭಟನೆ , ಟಗರು ಹಿಡ್ಕೊಂಡು ಬಂದ ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಸಚಿವ ಆರ್.ಶಂಕರ

oplus_0

ರಾಣೇಬೆನ್ನೂರು : ಮುಡಾ ನಿವೇಶನ ಹಂಚಿಕೆ ಪ್ರಕರಣ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಹಾಗೂ ಆ ಮೂಲಕ ರಾಜ್ಯ ಸರ್ಕಾರ ಅಸ್ಥಿರಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಸ್ಥಳೀಯ ಅಹಿಂದ ಸಮುದಾಯಗಳ ಒಕ್ಕೂಟದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
oplus_0
ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಕುರಿ ಹಿಂಡಿನ ಸಮೇತ ಮೆರವಣಿಗೆ ಹೊರಟ ಪ್ರತಿಭಟನಾಕರರು ಬಸ್‌ನಿಲ್ದಾಣದವರೆಗೆ ಸಾಗಿಬಂದರು.
ಈ ಸಮಯದಲ್ಲಿ ಮಾಜಿ ಸಚಿವ ಆರ್. ಶಂಕರ್ ಮಾತನಾಡಿ, ನಿಷ್ಕಳಂಕ ವ್ಯಕ್ತಿತ್ವದ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರಿಗೆ ಯಾವುದೇ ವಿವೇಚನೆಯಿಲ್ಲವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಕೊಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಇಡೀ ಅಹಿಂದ ವರ್ಗ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಂತಿದೆ. ಇದು ಅವರ ರಾಜಕಾರಣಕ್ಕೆ ಮಾದರಿಯಾಗಿದೆ. ಸಿದ್ದರಾಮಯ್ಯ ಆಡಳಿತ ವೈಖರಿ ಸಹಿಸದೆ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅ.೨೯ರಂದು ಸಿದ್ದರಾಮಯ್ಯ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಈ ಹಿಂದೆ ಇದೇ ರೀತಿ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಈಗ ಶೋಷಿತ ಸಮುದಾಯಗಳು ಜಾಗೃತವಾಗಿದ್ದು ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯAತೆ ನಿಂತಿವೆ. ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಕ್ಕ ಪಾಠವನ್ನು ಕಲಿಸಲು ಅಹಿಂದ ಸಮುದಾಯಗಳು ನಿರ್ಧರಿಸಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಅವಕಾಶ ನೀಡುವುದಿಲ್ಲ ಎಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮಹಿಳೆಯರಿಗೆ ಅಗೌರವ ತೋರಿಸಿದ ಕುಟುಂಬದವರು ಬಂದು ಸಿದ್ದರಾಮಯ್ಯ ಕುರಿತು ನೀತಿ ಪಾಠ ಹೇಳುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗÀವದ್ಗೀತೆ, ಶಕುನಿ ಬಾಯಲ್ಲಿ ಮಹಾಭಾರತ, ರಾವಣನ ಬಾಯಲ್ಲಿ ರಾಮಾಯಣ ಕೇಳುವಂತಾಗಿದೆ. ಇನ್ನು ಬಿಜೆಪಿಗರು ಭ್ರಷ್ಟಾಚಾರ ಮಾಡಿ ನಮ್ಮ ರೀತಿ ಜಗತ್ತು ಇದೆ ಅಂತ ಅಂದುಕೊAಡಿದ್ದಾರೆ. ಅವರಿಂದ ಸಿದ್ದರಾಮಯ್ಯ ಕೂದಲು ಅಲುಗಾಡಿಸಲು ಆಗುವುದಿಲ್ಲ. ನಮಗೆ ನ್ಯಾಯ ಸಿಗುತ್ತದೆ. ಒಂದು ವೇಳಿ ನ್ಯಾಯ ಸಿಗದೇ ಹೋದಲ್ಲಿ ನಾನು ಶಂಕರಣ್ಣ ಜತೆಗೂಡಿ ರಾಣೇಬೆನ್ನೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹೋಗುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಾವು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕಿತ್ತು. ಅಹಿಂದ ವರ್ಗದವರಿಗೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಒಗ್ಗಟ್ಟಾಗಿ ಅಹಿಂದ ವರ್ಗ ಕಾಪಾಡಬೇಕಾಗಿದೆ ಎಂದರು.
ರತ್ನಾಕರ ಕುಂದಾಪುರ, ಕೃಷ್ಣಮೂರ್ತಿ ಸುಣಗಾರ, ಪುಟ್ಟಪ್ಪ ಮರಿಯಮ್ಮನವರ, ಸಿದ್ದಣ್ಣ ಅಂಬಲಿ, ಮರಿಯಪ್ಪ ಪೂಜಾರ, ರವಿ ಹುಲಿಗೆಮ್ಮನವರ, ಆನಂದ ದೊಡ್ಡಮನಿ, ಜುಮ್ಮಣ್ಣಿ, ಬಿ.ಬಿ.ನಂದ್ಯಾಲ, ಮೃತ್ಯುಂಜಯ ಗುದಿದೇರ, ರೇಣುಕಾ ಲಮಾಣಿ, ಶೇರುಖಾನ ಕಾಬೂಲಿ, ರವೀಂದ್ರಗೌಡ ಪಾಟೀಲ, ಆನಂದ ಹುಲಬನ್ನಿ, ಷಣ್ಮುಖ ಕಂಬಳಿ, ಕಿರಣ ಗುಳೇದ, ಸುರೇಶ ಜಡಮಲಿ, ಡಾಕಪ್ಪ ಲಮಾಣಿ, ದೇವೇಂದ್ರಪ್ಪ ಕಾಟಿ, ಕೃಷ್ಣಪ್ಪ ಕಂಬಳಿ, ಹನುಮಂತಪ್ಪ ಕಬ್ಬಾರ ಸೇರಿದಂತೆ ಮತ್ತಿತರರಿದ್ದರು.
ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!