16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಸಿಎಂ ಬೆಂಬಲಿಸಿ ಅ.26 ರಂದು ನಗರದಲ್ಲಿ ಅಹಿಂದ, ದಲಿತ ಮುಖಂಡರ ಪ್ರತಿಭಟನೆ,

ರಾಣೆಬೇನ್ನೂರು:  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆಗೆ ಯತ್ನಿಸುತ್ತಿರುವ ರಾಜ್ಯಪಾಲರ ಕ್ರಮ ಖಂಡಿಸಿ, ಸಿದ್ದರಾಮಯ್ಯನವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ 30ಕ್ಕೂ ಅಧಿಕ ವಿವಿಧ ಸಮಾಜದ ಮುಖಂಡರ ಹಾಗೂ ಅಹಿಂದ ಸಂಘಟನೆಗಳ ಕಾರ್ಯಕರ್ತರಿಂದ ಅ.26 ರಂದು ಬೆಳಗ್ಗೆ 10.3Oಕ್ಕೆ  ನಗರದ  ಬಸ್ ನಿಲ್ದಾಣದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಮುಖಂಡ ರತ್ನಾಕರ ಕುಂದಾಪುರ ತಿಳಿಸಿದರು.

ನಗರದ ಶ್ರೀ ಗಂಗಾ ವಿವಿಧ ಉದ್ಧೇಶಗಳ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಅಂದು ಬೆಳಗ್ಗೆ 9.30 ಗಂಟೆಗೆ ಇಲ್ಲಿನ ಪಿಬಿ ರಸ್ತೆಯ ಕೆಇಬಿ ಗಣೇಶ ದೇವಸ್ಥಾನದಿಂದ ಸಾವಿರಾರು ಅಹಿಂದ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಸಂಚರಿಸಿ ನಗರದ  ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರನ್ನು ಕರ್ನಾಟಕದಿಂದ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಗುವುದು ಎಂದರು.

 

ಗಂಗಾಮತಸ್ಥ, ಕೊರವ, ವಾಲ್ಮಿಕಿ, ಬಂಜಾರ, ಸುಣಗಾರ, ಉಪ್ಪಾರ, ಮಾದರ, ಛಲವಾದಿ, ಕೊರಚ, ಭೋವಿ, ಗಂಗಾಮತಸ್ಥ, ಬಲಿಜ   ಸೇರಿಂದಂತೆ 30ಕ್ಕೂ ಅಧಿಕ. ಹಿಂದುಳಿದ  ಎಲ್ಲ ಸಮಾಜಗಳ ಅಹಿಂದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

 

ರಾಜ್ಯದಲ್ಲಿ ಜನಪ್ರಿಯ ನಾಯಕ ಹಾಗೂ ಅಹಿಂದ ವರ್ಗದ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಕುತಂತ್ರ ಮಾಡುತ್ತಿರುವ ರಾಜ್ಯಪಾಲರು ರಾಜ್ಯದಿಂದ ಮೊದಲು ತೊಲಗಬೇಕು. ಬಿಜೆಪಿ ಏಜಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು  ರಾಷ್ಟ್ರಪತಿಗಳು ವಾಪಸ್ ಕರೆಯಿಸಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮಣ್ಣ ನಾಯಕ, ಕೃಷ್ಣಮೂರ್ತಿ ಸುಣಗಾರ, ಷಣ್ಮುಖಪ್ಪ ಕಂಬಳಿ, ಮೃತ್ಯುಂಜಯ ಗುದಿಗೇರ,  ಆನಂದ ಹುಲ್ಬನ್ನಿ, ಮಲ್ಲೇಶಪ್ಪ ಮದ್ಲೇರ, ಸುರೇಶ ಜಾಡಮಾಲಿ, ಎಜಾಸಖಾನ್ ಸೌಧಾಗರ, ಶೇರುಖಾನ  ಕಾಬೂಲಿ, ಸಿದ್ದಪ್ಪ ಅಂಬಲಿ, ದುರಗಪ್ಪ ಕೊರಚರ, ಟಿ.ಕೆ. ಲಮಾಣಿ, ಅಶೋಕ ಟಿಕಾರೆ, ಬಸವರಾಜ ಉಪ್ಪಾರ, ಹನುಮಂತಪ್ಪ ಕಬ್ಬಾರ, ಗೋಪಿ ಕುಂದಾಪುರ ಸೇರಿದಂತೆ ಮತ್ತಿತರರು ಇದ್ದರು..

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!