ರಾಣೆಬೇನ್ನೂರು: ಸರ್ಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಣೆಬೇನ್ನೂರು ತಾಲೂಕಿನ ಹಾರೊಗೋಪ್ಪ ಗ್ರಾಮದ ಬಳಿ ನಡೆದಿದ್ದು, 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿಕಾರಿಪುರದಿಂದ ರಾಣೆಬೇನ್ನೂರು ನಗರಕ್ಕೆ ಸುಮಾರು 50 ಜನರು ಪ್ರಯಾಣಿಕರಿದ್ದ ಬಸ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ ಅದೃಷ್ಟವಶಾ ಯಾವುದೇ ಪ್ರಾಣಿಹಾನಿಯಾಗಿಲ್ಲ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿಸಲಾಗಿದೆ
ಸ್ಥಳಕ್ಕೆ ಹಲಗೇರಿ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕನಿಂದ ಬಿದ್ದು ಮಹಿಳೆ ಸಾವು…
ರಾಣೆಬೇನ್ನೂರು ತಾಲೂಕಿನ ಹೂಲಿಹಳ್ಳಿ ಬಳಿ ಬೈಕನಿಂದ ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸಿದ್ದೇಶ್ವರ ನಗರದ ಶಭಿಯಾ ಮುಬಾರಕ ಶಿಡೇನೂರು(30) ಮೃತಪಟ್ಟ ಮಹಿಳೆ.
ರಾಣೆಬೇನ್ನೂರು ನಗರದಿಂದ ಬ್ಯಾಡಗಿಗೆ ತೆರಳುತ್ತಿದ್ದ ಸಮಯದಲ್ಲಿ ನಾಯಿ ಅಡ್ಡ ಬಂದ ಕಾರಣ ಬೈಕನಿಂದ ಬಿದ್ದು ಸಾವನ್ನಪ್ಪಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ