ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಖಂಡನೆ; ಓಬಿಸಿ ಅಧ್ಯಕ್ಷ ಆನಂದ ಹುಲ್ಬನ್ನಿ

ರಾಣೇಬೆನ್ನೂರು : ರಾಜ್ಯಪಾಲರು ಮುಡಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರದ ಕೈಗೊಂಬೆಯAತೆ ವರ್ತಿಸುತ್ತಿರುವುದು ಸಾಬಿತಾದಂತಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಕುರುಬ ಸಂಘದ ಯುವ ಘಟಕದ ನಿರ್ದೇಶಕ ಹಾಗೂ ಕಾಂಗ್ರೇಸ್ ನಗರ ಘಟಕದ ಓಬಿಸಿ ಅಧ್ಯಕ್ಷ ಆನಂದ ಹುಲಬನ್ನಿ ತಿಳಿಸಿದರು.
ಈ ಕುರಿತು ಪತ್ರಿಕೆಗೆ ಅವರು ನೀಡಿರುವ ಹೇಳಿಕೆಯಂತೆ, ರಾಜ್ಯದಲ್ಲಿ ಕುರುಬ ಸಮಾಜದ ಜನಪ್ರಿಯ ನಾಯಕ ಹಾಗೂ ಅಹಿಂದ ವರ್ಗದ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಕುತಂತ್ರ ಇದಾಗಿದೆ. ನಿವೇಶನಗಳ ಹಂಚಿಕೆಯನ್ನು ರೂಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರವೇ ಆಗಿದೆ. ಸಿದ್ದರಾಮಯ್ಯ ಪತ್ನಿಯ ಸಹೋದರ ತಮ್ಮ ಸಹೋದರಿಗೆ ಅರಿಷಿಣ ಕುಂಕುಮ ರೂಪದಲ್ಲಿ ಆಸ್ತಿ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದ ರಾಜ್ಯಪಾಲರು ಇದೀಗ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸಮಂಜಸವಲ್ಲ ಇದು ಅತ್ಯಂತ ಖಂಡನೀಯವಾಗಿದೆ. ಮುಡಾ ವಿಷಯದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಹಾಗೇ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಕಷ್ಟು ಹಗರಣಗಳಾಗಿವೆ. ಅದನ್ನು ಕೈಬಿಟ್ಟು ಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿಗರು ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್, ಜಾಖಂಡ್ ಸಿಎಂ ಹೇಮಂತ್ ಸೋರೆನ್ ರೀತಿ ಜೈಲಿಗೆ ಕಳುಹಿಸಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಹುನ್ನಾರ ನಡೆಸುತ್ತಿದ್ದಾರೆ. ಮುಡಾ ವಿಷಯದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಲು ಬಲೆ ಹೆಣೆಯುತ್ತಿದ್ದಾರೆ. ಹಾಗೇ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಕಷ್ಟು ಹಗರಣಗಳಾಗಿವೆ. ಅದನ್ನು ಕೈಬಿಟ್ಟು ಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದನ್ನು ಇದೇ ರೀತಿ ಮುಂದುವರೆಸಿದಲ್ಲಿ ನಮ್ಮ ಸಮಾಜ ಹಾಗೂ ಅಹಿಂದ ವರ್ಗಗಳ ಜತೆಗೂಡಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!