ರಾಣೆಬೆನ್ನೂರ– ತಾಲೂಕಿನ ವೈ. ಟಿ. ಹೊನ್ನತ್ತಿ ಗ್ರಾಮದ ಯುವ ಯೋಧ ಶಿವಪ್ಪ ಸಣ್ಣಶಂಕ್ರಪ್ಪ ವಡತೇರ(48) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಶಿವಪ್ಪರವರು ಛತ್ತಿಸಘಡದಲ್ಲಿ ಇಂಡೋ -ಟಿಬೇಟ್ ಬಾರ್ಡರ್ ಆರ್ಮಿ ಪೊಲೀಸ್ ಆಗಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ತಾಯಿ ಚಂದ್ರಮ್ಮ, ಪತ್ನಿ ಅನಿತಾ, ಪುತ್ರ ಉಜ್ವಲ, ಪುತ್ರಿ ಖುಷಿ ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಹೊಂದಿದ್ದರು.
ರಜೆಯ ಸಂದರ್ಭದಲ್ಲಿ ಕಳೆದ 8 ದಿನಗಳ ಹಿಂದೆ ಊರಿಗೆ ಬಂದಿದ್ದ ಯೋಧರಿಗೆ ರವಿವಾರದಂದು ಹೃದಯಾಘಾತವಾಗಿತ್ತು. ರಾಣೆಬೆನ್ನೂರಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಯೋಧ ಶಿವಪ್ಪ ಮೃತಪಟ್ಟಿದ್ದಾರೆ .
ಮಂಗಳವಾರದಂದು ಹುಟ್ಟೂರು ವೈಟಿ ಯಲ್ಲಾಪುರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮೃತರ ಅಂತ್ಯಕ್ರಿಯ ನೆರವೇರಲಿದೆ ಎಂದು ಕುಟುಂಬ ಹಾಗೂ ತಾಲೂಕಾಡಳಿತದಿಂದ ತಿಳಿದು ಬಂದಿದೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ