ರಾಣೆಬೇನ್ನೂರು: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷಕ್ಕೆ ಸರಿಯಾದ ಆರ್ಥಿಕ ನೆರವು ಸಿಗದ ಕಾರಣ ನನ್ನ ಕೈಯಿಂದ ಹಣ ಖರ್ಚು ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಬಿಜೆಪಿ ಪಕ್ಷದ ವಿರುದ್ಧ ಆರೋಪಿಸಿದರು.
ಪಕ್ಷದ ಕಾರ್ಯ ಚಟುವಟಿಕೆಗಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ ಐದು ಲಕ್ಷ ರೂಪಾಯಿ ಹಣದ ಖರ್ಚು ವೆಚ್ಚದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಹದಿನೈದು ದಿನಗಳ ಕಾಲ ಜೆಡಿಎಸ್ ಕಾರ್ಯಕರ್ತರು ಹಾಗೂ ನಾನು ಬಿಜೆಪಿ ಪಕ್ಷದ ಗೆಲುವಿಗೆ ಓಡಾಟ ಮಾಡಿದ್ದೇವಿ. ಪಕ್ಷದ ಚಟುವಟಿಕೆಗಾಗಿ ಬೊಮ್ಮಾಯಿ ಹಿಂಬಾಲಕರು ಐದು ಲಕ್ಷ ಹಣ ನೀಡಿದ್ದರು ಅದರಂತೆ ಖರ್ಚು ಮಾಡಿದ ವಿವರವನ್ನು ಎಲ್ಲಾ ಜನರಿಗೆ ಗೊತ್ತಾಗಲಿ ಎಂದು ಹಾಕಲಾಗಿದೆ ಎಂದರು.
ಪತ್ರದಲ್ಲಿ ಏನಿದೆ..
ರಾಣೆಬೇನ್ನೂರು ತಾಲೂಕಿಗೆ 88000 ಸಾವಿರ ಹಣವನ್ನು ನೀಡಿರುತ್ತಾರೆ. ಅಮಿತಾ ಶಾ ಬಂದಾಹ ಜನರನ್ನು ಕರೆತಂದು ಸಮಯದಲ್ಲಿ ಇನ್ನೂ ಹೆಚ್ಚಿನ ಮೂರು ಲಕ್ಷ ಹಣ ಖರ್ಚಾಗಿರುತ್ತದೆ. ಅದನ್ನು ನಾನು ಭರಿಸಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹಣ ಕೋಡಲಿಕ್ಕೆ ನಮ್ಮ ಪಕ್ಷದ ನಗರ ಅಧ್ಯಕ್ಷರು ಹಾಗೂ ಮುಖಂಡರು ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಮೂರು ದಿನಗಳ ಕಾಲ ಹೋದರು ಹಣ ಕೋಡುತ್ತೆನೆ ಎಂದು ಕೊಡಲಿಲ್ಲ. ನಮ್ಮ ಪಕ್ಷದ ಮುಖಂಡರು ಹೇಳಿದ ತಕ್ಷಣ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕರೆ ಮಾಡಿದರು ಕರೆ ಸ್ವೀಕಾರ ಮಾಡದೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು. ಅಲ್ಲದೆ ಅಭ್ಯರ್ಥಿಯಾಗಿ ನಿಂತಿರುವ ಬಸವರಾಜ ಬೊಮ್ಮಾಯಿ ಜೆಡಿಎಸ್ ಪಕ್ಷವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಬಹಳ ಬೇಸರ ತಂದಿದೆ ಎಂದು ಪತ್ರದಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”