ರಾಣೆಬೇನ್ನೂರು: ಹಾವೇರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮತದಾನಕ್ಕೆ ಎಲ್ಲರಿಗೂ ಅವಕಾಶ ಹಾಗೂ ವೇತನ ಸಹಿತ ರಜೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದರು ಕೆಲ ಕಂಪನಿಗಳು ಹಾಗೂ ಸಂಸ್ಥೆಗಳು ಆದೇಶ ಉಲ್ಲಂಘನೆ ಮಾಡಿ ಕಾರ್ಮಿಕರ ಜತೆ ಕೆಲಸ ಮಾಡಿಸಿದ್ದಾರೆ.
ತಾಲೂಕಿನ ತೇರದಹಳ್ಳಿ ಗ್ರಾಮದಲ್ಲಿರುವ ವೆಂಕಟೇಶ ಹ್ಯಾಚರಿಸ್ ಹಾಗೂ ಗೋಲ್ಡನ್ ಹ್ಯಾಚರಿಸ್ ಚಿಕನ್ ಫ್ಯಾಕ್ಟರಿ ಮತದಾನಕ್ಕೆ ರಜೆ ನೀಡದೆ ಕಂಪನಿ ತೆರೆದು ಕೆಲಸ ಮಾಡಿಸುವುದು ಕಂಡು ಬಂದಿದೆ.
ನಿನ್ನೆ ದಿನ ಮಾನ್ಯ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಲ್ಲಾ ಕಂಪನಿ, ಸಂಘ ಸಂಸ್ಥೆಗಳ, ಶಾಲೆಗಳು ಸೇರಿದಂತೆ ಇತರೆ ಸಣ್ಣ ಕೈಗಾರಿಕೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಚಿಕನ ಫ್ಯಾಕ್ಟರಿ ವ್ಯವಸ್ಥಾಪಕ ಮಂಡಳಿ ಆದೇಶ ಉಲ್ಲಂಘನೆ ಮಾಡಿ ಕಾರ್ಮಿಕರ ಜತೆ ಕೆಲಸ ಮಾಡಿಸುವು ಮೂಲಕ ಕಾರ್ಮಿಕರ ಮತದಾನ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ರವಿಂದ್ರಗೌಡ ಪಾಟೀಲ ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿ ಈ ಕಂಪನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”