ರಾಣೆಬೇನ್ನೂರು: ಬಿಜೆಪಿ ಪಕ್ಷವು ರಾಜ್ಯದ ಯಾವೊಬ್ಬ ಕುರುಬ ರಾಜಕಾರಣಿಗೆ ಲೋಕಸಭಾ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ ಇಂತಹ ಪಕ್ಷಕ್ಕೆ ರಾಜ್ಯದ ಯಾವೊಬ್ಬ ಕುರುಬ್ರು ಬಿಜೆಪಿಗೆ ಮತ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಣೆಬೇನ್ನೂರು ನಗರದ ಅಂಜುಮನ್ ಮೈದಾನದಲ್ಲಿ ಹಾವೇರಿ ಲೋಕಸಭಾ ಚುನಾವಣೆಯ ಪ್ರಜಾದ್ವನಿ ಯಾತ್ರೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಕುರುಬ ಜನಾಂಗಕ್ಕೆ ಅನ್ಯಾಯ ಮಾಡಿದಂತೆ ಜನರಿಗೆ ಅನ್ಯಾಯ ಮಾಡುತ್ತಿರುವುದು ಬಿಜೆಪಿ ಪಕ್ಷಕ್ಕೆ ಅನ್ಯಾಯ ಮಾಡುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರಿ ಸುಳ್ಳು ಹೇಳುವು ಮೂಲಕ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದ ಅಭಿವೃದ್ಧಿ, ಬಡತನ, ನಿರುದ್ಯೋಗ ಬಗ್ಗೆ ಮಾತನಾಡದ ಕೇವಲ ಧರ್ಮ, ಜಾತಿ, ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಜನರು ಪ್ರಶ್ನಿಸಿ ಬೇಕು ಆದರೆ ಈಗ ಪ್ರಶ್ನಿಸುವ ದಿನ ಬಂದಿದ್ದು ಕಾಂಗ್ರೆಸ್ ಮತ ನೀಡುವ ಮೂಲಕ ಅವರಿಗೆ ಉತ್ತರ ನೀಡಬೇಕು ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯನ್ನು ಸಹಿಸಿಕೊಳ್ಳಲಾಗದೆ ಅಪಪ್ರಚಾರ ಮಾಡಿದರು. ಆದರೆ ನಾನು ನೀಡಿದ ಐದು ಭರವಸೆಗಳನ್ನು ಈಡೇರಿಸುವ ಮೂಲಕ ಜನರಿಗೆ ನೆರವು ನೀಡಿದ್ದೇನೆ ಎಂದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ