ರಾಣೆಬೆನ್ನೂರ: ಸ್ಥಳಿಯ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರ ಜನ್ಮದಿನದ ನಿಮಿತ್ತ ಭಾರತೀಯ ಜನತಾ ಪಕ್ಷ (ಬಿಜೆಪಿ)ಹಾಗೂ ಅರುಣಕುಮಾರ ಪೂಜಾರ ಅಭಿಮಾನಿಗಳ ವತಿಯಿಂದ ಆ. 25ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ನಗರ ಟಕದ ಅಧ್ಯಕ್ಷ ಮಂಜುನಾಥ ಕಾಟಿ ತಿಳಿಸಿದರು.
ನಗರದ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ನಗರದ ಚೌಡೇಶ್ವರಿ ದೇವಸ್ಥಾನ, ಕೆಇಬಿ ವಿನಾಯಕ ದೇವಸ್ಥಾನ, ದೊಡ್ಡಪೇಟೆ ಬಸವೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನಗಳಲ್ಲಿ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಗುವುದು.
10.30ಕ್ಕೆ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸರ್ಕಾರಿ ಹೆರಿಗೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಗುವುದು. 11 ಗಂಟೆಗೆ ಸ್ನೇಹದೀಪ ಅಂಧ ಶಾಲಾ ಮಕ್ಕಳಿಗೆ ಉಪಹಾರ ವಿತರಣೆ ಮಾಡಲಾಗುವುದು. ನಂತರ ನಗರದ ವಿವಿಧ ಭಾಗಗಳಲ್ಲಿ ನಿರ್ಗತಿಕರಿಗೆ ಬೆಡ್ಶೀಟ್ ವಿತರಣೆ ಮತ್ತು ಗ್ರಾಮೀಣ ಭಾಗದ ಕುರಿಗಾಹಿಗಳಿಗೆ ಜಕಿರ್ನ್ ನೀಡಲಾಗುವುದು.
ಸಂಜೆ 4 ಗಂಟೆಗೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರ ಜನ್ಮದಿನದ ಸಮಾರಂಭ ಜರುಗಲಿದೆ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪಕ್ಷದ ಗ್ರಾಮೀಣ ಟಕದ ಅಧ್ಯಕ್ಷ ಸುಭಾಸ ಶಿರಗೇರಿ, ನಗರಸಭೆ ಉಪಾಧ್ಯಕ್ಷ ಕೆಎಂಪಿ ಮಣಿ, ಸದಸ್ಯರಾದ ನಿಂಗರಾಜ ಕೋಡಿಹಳ್ಳಿ, ರಮೇಶ ಕರೆಡೆಣ್ಣನವರ, ಪ್ರಮುಖರಾದ ಸಿದ್ದು ಚಿಕ್ಕಬಿದರಿ, ಕುಬೇರಪ್ಪ ಕೊಂಡಜ್ಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!
ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ