ರಾಣೆಬೆನ್ನೂರ: ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ ಮತ್ತು ಕ್ಷೇತ್ರದ ಜನರ ಹಿತಕಾಯುವುದೆ ನಮ್ಮ ಮುಖ್ಯ ಉದ್ದೇಶವಾಗಿದೆ. ಅಧಿಕಾರ ಶಾಶ್ವತವಲ್ಲ, ಜನರ ಸೇವೆ ಎಂದೆಂದಿಗೂ ಶಾಶ್ವತವಾಗಿ ಬೆಳೆಸುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ನಾನು ರಾಜಕೀಯಕ್ಕೆ ಬಂದವನು ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನತೆ ಬಹಳಷ್ಟು ವಿಶ್ವಾಸವಿಟ್ಟುಕೊಂಡು ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದರು. ಅದಕ್ಕೆ ಚಿರಋಣಿಯಾಗಿ ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಕೆರೆಗಳನ್ನು ತುಂಬಿಸುವ ಯೋಜನೆ, ಮೇಗಾ ಮಾರುಕಟ್ಟೆ ಅಭಿವೃದ್ಧಿ, ಕ್ಷೇತ್ರದ ದೇವಸ್ಥಾನಗಳ ಜೀಣೋದ್ಧಾರ ಸೇರಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.
ಅಧಿಕಾರ ಯಾವತ್ತೂ ಒಬ್ಬರ ಬಳಿಯೆ ಉಳಿಯುವುದಲ್ಲ. ಆದರೆ, ನಾವು ಮಾಡುವ ಕಾರ್ಯಗಳು ಮಾತ್ರ ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತವೆ. ಆ ಕಾರಣಕ್ಕಾಗಿಯೆ ಇಂದಿಗೂ ಕ್ಷೇತ್ರದ ಯಾವ ಮೂಲೆಗೆ ಹೋದರೂ ಜನತೆ ನನ್ನನ್ನು ವಿಶ್ವಾಸ, ಗೌರವದಿಂದ ಕಾಣುತ್ತಾರೆ ಎಂಬುದಕ್ಕೆ ಸಾಯಾಗಿದೆ. ಮುಂದೆಯೂ ಅಧಿಕಾರದಲ್ಲಿ ಇರಲಿ, ಇರದೆ ಇರಲಿ ಜನರ ಸೇವೆ ಮಾತ್ರ ಸದಾ ಮುಂದುವರಿಯಲಿದೆ. ಆದ್ದರಿಂದ ಎಲ್ಲರ ಆಶೀರ್ವಾದ ನಮಗೆ ಬೇಕು ಎಂದರು.
ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಶ್ರೀನಿವಾಸ ಕಾಕಿ, ಸಂತೋಷಕುಮಾರ ಪಾಟೀಲ, ಭಾರತಿ ಜಂಬಗಿ, ನಿಂಗರಾಜ ಕೋಡಿಹಳ್ಳಿ, ಮಂಜುನಾಥ ಓಲೇಕಾರ, ಶಿವಕುಮಾರ ನರಸಗೊಂಡರ, ಚೋಳಪ್ಪ ಕಸವಾಳ, ಮಂಜುನಾಥ ಕಾಟಿ, ಸುಭಾಸ ಶಿರಗೇರ, ಕೆಎಂಪಿ ಮಣಿ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ಚೋಳಪ್ಪ ಕಸವಾಳ, ರಮೇಶ ಕರಡೆಣ್ಣನವರ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

More Stories
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!
ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ