ರಾಣೆಬೇನ್ನೂರು: 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪರಾಕ್ರಮ ಮೆರೆದ ಶಿವಶಕ್ತಿ ಎಂಬ ಯುದ್ಧ ಟ್ಯಾಂಕರ್ ಸ್ಥಾಪನೆ ಮಾಡಿರುವುದು ರಾಣೆಬೇನ್ನೂರು ತಾಲೂಕಿನ ಹೆಮ್ಮೆಯ ವಿಷಯವೆಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ ಹೇಳಿದರು.
ನಗರದ ಎಪಿಎಂಸಿ ಗಣೇಶ ದೇವಸ್ಥಾನದ ಎದುರು ಯುದ್ದ ಟ್ಯಾಂಕರ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಶಿವಶಕ್ತಿ ಯುದ್ಧ ಟ್ಯಾಂಕರ್ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ. ಪಾಕಿಸ್ತಾನ ವಿಭಜನೆ ಗೊಳಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದ ಯುದ್ಧದಲ್ಲಿ ಶಿವಶಕ್ತಿ ಟ್ಯಾಂಕರ್ ಬಳಸಲಾಗಿತ್ತು. ಇಂತಹ ಶಿವಶಕ್ತಿ ಟ್ಯಾಂಕರ್ ರಾಣೆಬೇನ್ನೂರು ಜನತೆಗೆ ವಿಶೇಷ ಕೊಡುಗೆ ಇದರ ಮಾಹಿತಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.
ಭಾರತ ದೇಶದ ಸೈನಿಕರು ಯಾರಿಗೂ ಹೆದರಲ್ಲ, ಬೆದರಲ್ಲ ಎಂಬುದನ್ನು ಯುದ್ಧದಲ್ಲಿ ತೋರಿಸಿಕೊಟ್ಟಿದ್ದಾರೆ. ಇತಿಹಾಸ ತಿಳಿದವರು ಮಾತ್ರ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಇಂದಿನ ಯುವ ಪೀಳಿಗೆ ಕೆಳಗೆ ನಿಂತು ನನ್ನ ಭಾಷಣ ಕೇಳುವುದಷ್ಟೇ ಅಲ್ಲ, ಮುಂದೊಂದು ದಿನ ನೀವು ಕೂಡ ನನ್ನಗಿಂತ ದೊಡ್ಡ ಸ್ಥಾನಕ್ಕೆ ಏರುವ ಮಹತ್ವದ ಸಂಕಲ್ಪ ಮಾಡಬೇಕು ಎಂದರು.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಆರ್. ಶಂಕರ ಮತ್ತಿತರರು ಭಾಗಿ
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!