ರಾಣೆಬೇನ್ನೂರು: ಸದನದಲ್ಲಿ ಸಂವಹನ ಕೊರತೆಯಿಂದ ಬಿಜೆಪಿ ಮುಖಂಡರು ಯುದ್ದ ಟ್ಯಾಂಕರ್ ಪ್ರತಿಷ್ಠಾಪನೆಗೆ ಬಿಜೆಪಿಯರು ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತವಾಗಿ ನಾಳೆಯ ಕಾರ್ಯಕ್ರಮಕ್ಕೆ ಸಾಥ್ ನೀಡಿ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಎರಡು ವರ್ಷಗಳಿಂದ ರಾಣೆಬೇನ್ನೂರು ನಗರದಲ್ಲಿ ಯುದ್ಧ ಟ್ಯಾಂಕರ್ ತರಬೇಕು ಎಂಬ ಆಸೆಯಿತ್ತು. ಅದರಂತೆ ನಮ್ಮ ಸ್ನೇಹಿತ ಸೈನ್ಯದಲ್ಲಿ ಇರುವ ಹಿನ್ನೆಲೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ಸಹಾಯದಿಂದ ಈ ಒಂದು ಯುದ್ಧ ಟ್ಯಾಂಕರ್ ತರಲಾಗಿದೆ. ಆದರೆ ಇದರಲ್ಲಿ ವೈಯಕ್ತಿಕ ರಾಜಕೀಯ ಮಾಡಿಲ್ಲ ಎಂದರು.
ಬೆಳಗ್ಗೆ 7.30ಕ್ಕೆ ನಗರದ ಎಪಿಎಂಸಿ ಗಣಪತಿ ದೇವಸ್ಥಾನದ ಬಳಿ ಯುದ್ಧ ಟ್ಯಾಂಕರ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸುವರು. ಅಲ್ಲಿಂದ ಮೆರವಣಿಗೆಯೊಂದಿಗೆ ಯುದ್ಧ ಟ್ಯಾಂಕರ್ ಮುನ್ಸಿಪಲ್ ಮೈದಾನಕ್ಕೆ ಬರಲಿದೆ. ಅಲ್ಲಿ ಧ್ವಜಾರೋಹಣ ಮುಗಿದ ಬಳಿಕ ಮಿನಿ ವಿಧಾನಸೌಧಕ್ಕೆ ತಂದು ಸ್ಥಾಪಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಯುದ್ಧ ಟ್ಯಾಂಕರ್ ಸಾರ್ವಜನಿಕರ ಪ್ರದರ್ಶನಕ್ಕೆ ಅನಾವರಣಗೊಳಿಸುವರು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಸೇರಿ ಬೆಟ್ಟ ಮಲ್ಲಪ್ಪನ ಗುಡ್ಡಕ್ಕೆ ಜೀಪ್ ಚಾಲನೆ, ದೊಡ್ಡಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಯುದ್ಧ ಟ್ಯಾಂಕರ್ ಉದ್ಘಾಟನೆ ಸಮಯದಲ್ಲಿ ಎಲ್ಲ ಪಕ್ಷದವರನ್ನು ಆಹ್ವಾನ ಮಾಡಿದ್ದೇನೆ. ಇದು ದೇಶಾಭಿಮಾನದ ಸಂಕೇತವಾಗಿದ್ದು ಎಲ್ಲ ಮಾಜಿ ಶಾಸಕರು, ಮಾಜಿ ಸೈನಿಕರನ್ನು ಸೇರಿ ಎಲ್ಲರಿಗೂ ಕರೆಯಲಾಗಿದೆ. ಪಾತೀತವಾಗಿ ಈ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಯುದ್ಧ ಟ್ಯಾಂಕರ್ ಇಡಲು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಕಟ್ಟೆ ನಿಮಿರ್ಸಲಾಗಿದೆ. ಆದ್ದರಿಂದ ಅದರ ಮೇಲೆ ನನ್ನ ಹೆಸರು, ಭಾವಚಿತ್ರ ಹಾಕಿಸಿದ್ದೇನೆ. ಇದರ ಜತೆಗೆ ಯುದ್ಧ ಟ್ಯಾಂಕರ್ ಪರಾಕ್ರಮ ಕುರಿತು ಹಿತ್ತಾಳೆ ಪ್ಲೇಟ್ನಲ್ಲಿ ಸಮಗ್ರ ಮಾಹಿತಿ ಒಳಗೊಂಡ ನಾಮಲಕ ಸಿದ್ಧಪಡಿಸಿದ್ದು ಅದನ್ನು ಅಳವಡಿಸಲಾಗುವುದು ಎಂದರು.
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!