ರಾಣೆಬೇನ್ನೂರು: ನಗರದ ಮಿನಿವಿಧಾನಸೌಧ ಎದುರು 1951 ರಲ್ಲಿ ಪಾಕಿಸ್ಥಾನ ಯುದ್ದದಲ್ಲಿ ಭಾಗಿಯಾಗಿ ಪರಾಕ್ರಮ ಮೆರೆದಿದ್ದ ಭಾರತದ “ಶಿವಶಕ್ತಿ” ಎಂಬ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಟೋ ಹಾಗೂ ಹೆಸರಿನ ಜಟಾಪಟಿ ನಡೆದಿದೆ.
ಹೌದು ಶಾಸಕರು ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಅದರಲ್ಲಿ ಹಾಕಿರುವ ಶಾಸಕರ ಭಾವಚಿತ್ರ ಹಾಗೂ ಎನ್ ಜಿ ಓ ಹೆಸರು ಹಾಕಿರುವುದಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ಎತ್ತಿದ್ದು ಕೂಡಲೇ ಅಧಿಕಾರಿಗಳು ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರಸಭೆ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಹಣ ಹಾಕಿ ಭಾವಚಿತ್ರ ಹಾಗೂ ಹೆಸರು ಹಾಕಿಸಿಕೊಳ್ಳಲ್ಲಿ ಅದನ್ನು ಬಿಟ್ಟು ನಗರಸಭೆ ಹಣ ಹಾಗೂ ಜನರ ತೆರಿಗೆ ಹಣವನ್ನು ಬಳಸಿಕೊಂಡು ತಾವು ಪ್ರಚಾರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಶಾಸಕರು ತಾವು ತಮ್ಮ ಮಾನ ಮುಚ್ಚಿಕೊಳ್ಳಲು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಎರಡು ವರ್ಷದಿಂದ ಯುದ್ಧ ಟ್ಯಾಂಕರ್ ನಿರ್ಮಾಣ ಮಾಡಲು ಪ್ರಯತ್ನ ಮಾಡಿದ್ದೇನೆ. ಆದರೆ ಬಿಜೆಪಿಯವರು ಅದರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಬಿಜೆಪಿ ಪಕ್ಷವು ಯಾವತ್ತಿಗೂ ದೇಶ, ಸೈನ್ಯ, ಸೈನಿಕರ ಬಗ್ಗೆ ಎಂದು ವಿರೋಧ ಮಾಡಿಲ್ಲ ಮಾಡುವುದಿಲ್ಲ. ಆದರೆ ಶಾಸಕರು ಇಂತಹ ಅವಿವೇಕಿತನದ ಮಾತುಗಳನ್ನಾಡಿರುವು ಅಕ್ಷಮ್ಯ ಅಪರಾಧವಾಗಿದೆ. ಕೂಡಲೇ ಅವರು ಅದೇ ಸದನದಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಯುದ್ಧ ಟ್ಯಾಂಕರ್ ನಿರ್ಮಾಣಕ್ಕೆ ಸ್ಥಳೀಯ ನಗರಸಭೆ ಅನುದಾನ ಹಾಗೂ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಮಾಡಲಾಗುತ್ತದೆ. ಅದನ್ನು ಬಿಟ್ಟು ಶಾಸಕರು ತಾವೇ ಸ್ವತಃ ಹಣ ಹಾಕಿ ಮಾಡಿಸುತ್ತಿದ್ದಾರೆ ಎಂದು ಭಾವಚಿತ್ರ ಹಾಗೂ ಹೆಸರು ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಸರ್ಕಾರದ ಅನುದಾನ ಬಳಕೆಯಾಗಿದೆ ಎಂದರೆ ಸರ್ಕಾರದ ಶಿಷ್ಟಾಚಾರ ಪಾಲಿಸಿ ಎಲ್ಲರೂ ಹೆಸರು ಹಾಕಿಸಬೇಕು ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿ ಸಮಯದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ಪವಾರ, ಚೋಳಪ್ಪ ಕಸವಾಳ, ಪರಮೇಶಣ್ಣ ಗೂಳಣ್ಣನವರ, ಭಾರತಿ ಜಂಬಗಿ, ಸಿದ್ದಣ್ಣ ಚಿಕ್ಕಬಿದರಿ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಇತರರಿದ್ದು.
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!