ರಾಣೆಬೇನ್ನೂರು: ಹೆಂಡತಿಯ ಶೀಲ ಸಂಕಿಸಿದ ಪತಿರಾಯ ಪತ್ನಿಯ ಕತ್ತುಕೊಯ್ದು ಹತ್ಯಗೆ ಯತ್ನಿಸಿದ ಘಟನೆ ನಗರದ ಹೊರಭಾಗದ ಸುವರ್ಣ ಪಾರ್ಕಿನಲ್ಲಿ ನಡೆದಿದೆ.
ಬೆಂಗಳೂರಿನ ಉಲ್ಲಾಳದ ಪದ್ಮಾ ಯೋಗೇಶ(22) ಹತ್ಯೆಗೆ ಒಳಗಾದ ಮಹಿಳೆ. ದಾವಣಗೆರೆ ಶ್ರೀರಾಮನಗರದ ಯೋಗೇಶ(22) ಪತ್ನಿಯ ಹತ್ಯೆಗೆ ಯತ್ನಿಸಿದ ಆರೋಪಿ.
ಪದ್ಮಾ ಒಂದನೇ ಪತಿ ಬಿಟ್ಟ ಬಳಿಕ ಯೋಗೇಶನನ್ನು ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಇದಾದ ಬಳಿಕ ಇಬ್ಬರು ದಾವಣಗೆರೆಯಲ್ಲಿ ನೆಲೆಸಿದ್ದರು. ಪದ್ಮಾ ರಾಣೆಬೆನ್ನೂರ ನಗರದಲ್ಲಿ ವೃದ್ದರೊಬ್ಬರನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಂಡಿದ್ದಳು.
ಆದರೆ ಇತ್ತೀಚಿನ ದಿನಗಳಲ್ಲಿ ನೀನು ಯಾರದ್ದೋ ಜತೆ ಮಾತನಾಡುತ್ತೀಯಾ ಎಂದು ಯೋಗೇಶ ಪದ್ಮಾಳೊಂದಿಗೆ ಜಗಳ ಮಾಡುತ್ತ ಬಂದಿದ್ದ.ಇದೇ ಕಾರಣಕ್ಕೆ ಬುಧವಾರ ಪದ್ಮಾಳನ್ನು ಪಾನಿಪುರಿ ತಿನಿಸುವೆ ಬಾ ಎಂದು ಕರೆದುಕೊಂಡು ಹೋಗಿ ಸ್ವರ್ಣ ಪಾರ್ಕ್ ನಲ್ಲಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ
ಆತನಿಂದ ಬಿಡಿಸಿಕೊಂಡು ಓಡುತ್ತಿದ್ದ ಪದ್ಮಾಳನ್ನು ನೋಡಿದ ಸ್ಥಳೀಯರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಹಲಗೇರಿ ಠಾಣೆ ಪೊಲೀಸರು ಪದ್ಮಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ
ಆರೋಪಿ ಯೋಗೇಶ ಪೊಲೀಸರನ್ನು ನೋಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ.
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!