ರಾಣೆಬೇನ್ನೂರು: ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕನೊರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಿರಣ ಫಕ್ಕಿರಪ್ಪ ಕೋಟೆಪ್ಪನವರ(22) ಎಂಬ ಯುವಕ ತೀವ್ರ ಜ್ವರದಿಂದ ಮೃತಪಟ್ಟಿದ್ದಾನೆ.
ಈತನು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದ ಸಮಯದಲ್ಲಿ ಡೆಂಗ್ಯೂ ಜ್ವರ ಎಂಬದು ದೃಢಪಟ್ಟಿದೆ. ನಂತರ ಚಿಕಿತ್ಸೆ ನೀಡಿದರು ಯುವಕ ಮೃತಪಟ್ಟಿದ್ದಾನೆ.
ಕರೂರು ಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆ…. ಸುಮಾರು ಐದು ಸಾವಿರ ಜನಸಂಖ್ಯೆ ಹೊಂದಿರುವ ಕರೂರು ಗ್ರಾಮದಲ್ಲಿ ಸ್ವಚ್ಛತೆ ಎಂಬದು ಕನಸಾಗಿ ಉಳಿದಿದೆ. ಕಳೆದ ಎರಡು ತಿಂಗಳಿಂದ ಗಟಾರ ಸ್ವಚ್ಛತೆ ಮಾಡದೆ ಇರುವ ಕಾರಣ ಸೊಳ್ಳೆಗಳು ಜಾಸ್ತಿಯಾಗಿವೆ. ಇದರಿಂದ ರೋಗರುಜಿನಗಳು ಜಾಸ್ತಿಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!