ರಾಣೆಬೇನ್ನೂರು: ನಗರದ ನಾಡಿಗೇರ ಓಣಿಯ ಪಿ.ಟಿ.ಕಾಕಿಯಲ್ಲಿ ಮನೆಯಲ್ಲಿ ಕಂಡ ಚಿರತೆ ಹಲವು ಆಟಗಳನ್ನು ಆಡಿಸಿ ಕೊನೆಗೂ ಅರಿವಳಿಕೆ ತಜ್ಞರ ಚುಚ್ಚುಮದ್ದು ಮೂಲಕ ಚಿರತೆಯನ್ನು ಸೆರೆ ಹಿಡಿಯಲಾಯಿತು.
ಬೆಳಿಗ್ಗೆ ಐದು ಗಂಟೆಗೆ ಕಾಣಿಸಿಕೊಂಡರು ಚಿರತೆ ಮನೆಯಿಂದ ಮನೆಗೆ ಹೋಗಿ ಅವಿತುಕೊಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವು ತಂದಿತು. ನಂತರ ಗದಗನಿಂದ ಆಗಮಿಸಿದ ಅರಿವಳಿಕೆ ತಜ್ಞರು ಅವಿತುಕೊಂಡಿದ್ದ ಚಿರತೆಗೆ ಗನ್ ಮೂಲಕ ಶೂಟ್ ಮಾಡಿ ಅರವಳಿಕೆ ಔಷಧಿ ನೀಡಲಾಯಿತು. ನಂತರ ಚಿರತೆ ಪ್ರಜ್ಞೆ ತಪ್ಪಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೋಲಿಸರು ಚಿರತೆಯನ್ನು ಅರಣ್ಯ ಇಲಾಖೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡಿದ್ದಾರೆ.
ಈ ಸಮಯದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೋಲಿಸರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.