ರಾಣೆಬೇನ್ನೂರು: ಸಾರ್ವಜನಿಕವಾಗಿ ಕುರುಬ ಜನಾಂಗದ ಬಗ್ಗೆ ನಿಂದನೆ ಮಾಡಿ ಹಾಗೂ ಕುರುಬ ಸಮಾಜದ ಸಿಎಂ ಆಗಿರುವ ಸಿದ್ದರಾಮಯ್ಯರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕಾ ಪ್ರದೇಶ ಕುರುಬರು ಸಂಘದ ವತಿಯಿಂದ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಕುರುಬ ಸಂಘದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಕಂಬಳಿ ಮಾತನಾಡಿ, ನಾಡಿನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರವರು ಕುರುಬ ಜಾತಿಯವರಾದ್ದರಿಂದ ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಹಾಗೂ ಕುರುಬ ಜಾತಿಯ ಬಗ್ಗೆ ಕೀಳಾಗಿ ಕೆಟ್ಟ ರೀತಿಯಲ್ಲಿ ಆಗೌರವವಾಗಿ ಆಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಕುರುಬ ಜಾತಿಯನ್ನು ನಿಂದನೆ ಮಾಡಿ ಸಮಾಜಕ್ಕೆ ಅವಮಾನವನ್ನು ಮಾಡಿರುತ್ತಾರೆ.
ಈ ವಿಕೃತ ಮನಸುಳ್ಳ ವ್ಯಕ್ತಿಗಳಿಂದ ಜಾತಿ ಜಾತಿಗಳ ನಡುವೆ ದ್ವೇಷವನ್ನು ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸಿರುತ್ತಾರೆ. ಸಾರ್ವಜನಿಕವಾಗಿ ಬೈದಿರುವ ವೀಡಿಯೋ ದೃಶ್ಯಗಳು ಈದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಇವರ ಮೇಲೆ ಜಾತಿ ನಿಂದನೆ ಹಾಗೂ ಆಶ್ಲೀಲ ಪದಗಳನ್ನು ಬಳಸಿ ಕುರುಬ ಸಮಾಜಕ್ಕೆ ಅವಮಾನ ಮಾಡಿರುವು ಮಂಡ್ಯ ಜಿಲ್ಲೆಯ ಶಾನುಭೋಗನಹಳ್ಳಿ ಗ್ರಾಮದ
ಬಿ.ಎನ್ ಕುಮಾರ್ ತಂದೆ ನಿಂಗಯ್ಯ ಹಾಗೂ ಮಹೇಶ್ ಎಂಬುವವರನ್ನು ಕೂಡಲೇ ಬಂಧಿಸಿ ಕಾನೂನು ಕಮವನ್ನು ಜರುಗಿಸಬೇಕು ಎಂದು ಹೇಳಿದರು.
ಒಂದು ವೇಳೆ ಇವರ ಮೇಲೆ ಕಾನೂನು ಕ್ರಮ ಜರುಗಿಸದಿದ್ದಲ್ಲಿ ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*