ರಾಣೆಬೇನ್ನೂರು: ತಾಲೂಕಿನ ಐರಣಿ ತಾಂಡದಲ್ಲಿ ಬೆಳ್ಳಂಬೆಳಿಗ್ಗೆ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಸೋಮವಾರ ನಡೆದಿದೆ.
ಐರಣಿ ಗ್ರಾಮದ ರುದ್ರಪ್ಪ ಲಮಾಣಿ(47) ಎಂಬ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿದೆ.
ಬೆಳಿಗ್ಗೆ ರುದ್ರಪ್ಪ ಲಮಾಣಿ ಎಂದಿನಂತೆ ಶೌಚಾಲಯಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ಚಿರತೆ ಒಮ್ಮೆಲೆ ದಾಳಿ ಮಾಡಿದ್ದು, ವ್ಯಕ್ತಿಯ ಮೈ ಪರಚಿದೆ. ನಂತರ ಗ್ರಾಮಸ್ಥರು ನೋಡಿದಾಗ ವ್ಯಕ್ತಿಯನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಚಿರತೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
Hi