ರಾಣೆಬೇನ್ನೂರು: ತಾಲೂಕಿನ ಮಾಕನೂರು ಕ್ರಾಸ್ ಬಳಿ ಲಾಟೇರ ಹೊಲದಲ್ಲಿ ಹಣ ಪಣಕಿಟ್ಟು ಅಂದರ್-ಬಾಹರ್ ಆಡುತ್ತಿದ್ದ ಇಸ್ಪೀಟು ಅಡ್ಡೆ ಮೇಲೆ ಕುಮಾರಪಟ್ಟಣಂ ಪೋಲಿಸರು ದಾಳಿ ಮಾಡಿ 1.71 ಲಕ್ಷ ಹಣವನ್ನು ಜಪ್ತಿ ಮಾಡಿ 13 ಜನರ ಮೇಲೆ ಇದೀಗ ಪ್ರಕರಣ ದಾಖಲಿಸಲಾಗಿದೆ.
ಮಾಕನೂರು ಕ್ರಾಸ್ ಬಳಿ ತಮ್ಮ ಲಾಭಕ್ಕಾಗಿ ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಆಟವನ್ನು ಆಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ಕುಮಾರಪಟ್ಟಣಂ ಪಿಎಸ್ಐ ಸಂಗೀತಾ ದೊಡ್ಡಮನಿ ದಾಳಿ ಮಾಡಿದ್ದಾರೆ.
ಈ ಸಮಯದಲ್ಲಿ ಆಟವಾಡುತ್ತಿದ್ದ ಅಷ್ಟಮೂರ್ತಿ ಅಶೋಕಪ್ಪ ಓಲೇಕಾರ, ಹನುಮಂತಪ್ಪ ಈರಪ್ಪ ಹೊನ್ನಪ್ಪನವರ, ಕರಬಸಪ್ಪ ಮಲ್ಲೇಶಪ್ಪ ಕಂಬಳಿ, ಹನುಮಂತಪ್ಪ ಶೇಖಪ್ಪ ಹಳ್ಳಳೆಪ್ಪನವರ, ಗಣೇಶ ನಾಗಪ್ಪ ಹಿತ್ತಲಮನಿ ಹಾಗೂ ಇತರೆ 13 ಜನರ ಮೇಲೆ ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!