ರಾಣೆಬೇನ್ನೂರು: ಸರ್ಕಾರದ ಕೆಲಸ ಮಾಡುವ ಅಧಿಕಾರಿಗಳು ಯಾವುದೇ ಭ್ರಷ್ಟತೆ, ಅಸಹನತೆಯಿಂದ ಕೆಲಸ ಮಾಡುವ ಬದಲು ರಾಜೀನಾಮೆ ಕೊಟ್ಟು ಹೋಗಿ ತಮ್ಮ ತಮ್ಮ ಕೆಲಸ ಮಾಡಬಹುದು ಎಂದು ಲೋಕಾಯುಕ್ತ ಡಿಎಸ್ಪಿ ಮಧುಸೂದನ್ ಹೇಳಿದರು.
ರಾಣೆಬೇನ್ನೂರು ನಗರದ ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳನ್ನು ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿ ಮಾತನಾಡಿದರು.
ಸರ್ಕಾರಿ ಕಚೇರಿಗಳ ದುರಾಡಳಿತ ಬಗ್ಗೆ, ಸಾರ್ವಜನಿಕ ಕೆಲಸಗಳ ವಿಳಂಬ ನೀತಿ, ಕಳಪೆ ಕಾಮಗಾರಿ ಬಗ್ಗೆ ಅಪಾರ ದೂರುಗಳು ಲೋಕಾಯುಕ್ತ ಕಡೆ ದಾಖಲು ಆಗುತ್ತಿವೆ. ಆದ್ದರಿಂದ ಅಧಿಕಾರಿಗಳು ಸರ್ಕಾರದ ಕೆಲಸವನ್ನು ಸರಿಯಾಗಿ ಮಾಡಬೇಕು ಎಂದು ಸೂಚಿಸಿದರು. ಇನ್ನೂ ಸರ್ಕಾರಿ ನೌಕರರ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಅನೇಕರು ದೂರುಗಳನ್ನು ಪ್ರಾಧಿಕಾರದ ಹತ್ತಿರ ನೀಡಿದ್ದಾರೆ ಇದನ್ನು ಗಮನಿಸಿದರೆ ಲಂಚ ಬೇಡಿಕೆ ಹೆಚ್ಚಾಗಿದೆ ಎಂದರು.
ಆದ್ದರಿಂದ ಸರ್ಕಾರಿ ಅಧಿಕಾರಿಗಳು ಸ್ವಚ್ಛ ಕೈಯಿಂದ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದರು
ಸಭೆಯಲ್ಲಿ ಪೋಲಿಸ್ ನಿರೀಕ್ಷಕ ದಾದಾವಲಿ ಕೆ.ಎಚ್, ಮಂಜುನಾಥ ಪಂಡಿತ ಹಾಗೂ ಬಸವರಾಜ ಹಳಬಣ್ಣನವರ, ತಹಸೀಲ್ದಾರ ಆರ್.ಎಚ್.ಭಾಗವಾನ, ಪೌರಾಯುಕ್ತ ಎಫ್.ಐ.ಇಂಗಳಗಿ ಸಭೆಯಲ್ಲಿ ಭಾಗವಹಿಸಿದ್ದರು.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.