ರಾಣೆಬೇನ್ನೂರು: ಕಳಪೆ ಬೀಜ ಮಾರಾಟದ ಮಾಡಿದ ನಗರದ ಐದು ಬೀಜದಂಗಡಿಗಳಿಗೆ ಬೀಜ ಮುದ್ರೆ ಹಾಕಿರುವ ಕೃಷಿ ಅಧಿಕಾರಿಗಳ ತಂಡ ಬರೋಬ್ಬರಿ 2.40 ಟನ್ ವಿವಿಧ ಕಂಪನಿ ಬೀಜದ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಐದು ಅಂಗಡಿಗಳ ಮಾಲೀಕರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪಿ.ಬಿ. ರಸ್ತೆಯ ಕೆ.ಬಿ. ಸೀಡ್ಸ್, ಮಣಿಕಂಠ ಸೀಡ್ಸ್, ಪ್ರಕಾಶ ಹೈಬಿಡ್ರ ಸೀಡ್ಸ್, ಸೂಯೋರ್ದಯ ಸೀಡ್ಸ್, ನಂದಿ ಸೀಡ್ಸ್ ಮಳಿಗೆಗಳನ್ನು ಜಪ್ತಿ ಮಾಡಿ 2.40 ಟನ್ ವಿವಿಧ ಕಂಪನಿಯ ಬಿತ್ತನೆ ಬೀಜ ಹಾಗೂ ಬಿಲ್ ಪುಸ್ತಕ ಜಪ್ತಿ ಮಾಡಲಾಗಿದೆ. ಬೀಜದಂಗಡಿಯವರು ಕಳಪೆ ಬೀಜ ಮಾರಾಟ ಮಾಡಿದ್ದಾರೆ ಎನ್ನುವ ಆರೋಪವಿದ್ದು ತನಿಖೆ ಕೈಗೊಳ್ಳುವ ಉದ್ದೇಶದಿಂದ ಬೀಜದಂಗಡಿ ಜಪ್ತಿ ಮಾಡಿ ದೂರು ದಾಖಲಿಸಲಾಗಿದೆ.
ನಗರದಲ್ಲಿ ಕಳಪೆ ಬೀಜ ಮಾರಾಟ ಮಾಡಿದ್ದಾರೆ ಎನ್ನಲಾದ 10 ಅಂಗಡಿಗಳಿಂದ ಅವರು ಮಾರಾಟ ಮಾಡಿದ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಗುಣಮಟ್ಟ ಹಾಗೂ ಮೊಳಕೆಯೊಡೆಯುವಿಕೆ ಪರಿಶೀಲಿಸುವ ಉದ್ದೇಶದಿಂದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಕೃಷಿ ನಿರ್ದೇಶಕ (ಜಾರಿದಳ) ಮಾರುತಿ ಅಂಗರಗಟ್ಟಿ, ಕೃಷಿ ಅಧಿಕಾರಿಗಳಾದ ಬಸವರಾಜ ಎ್.ಎಂ., ಅರವಿಂದ ಎಂ., ವೀರೇಶ ಜೆ.ಎಂ. ತಂಡದಲ್ಲಿದ್ದರು.
More Stories
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು ಮೇಳ.
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!
ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.