ರಾಣೆಬೇನ್ನೂರು: ಸ್ಮಶಾನ ಜಾಗಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸರ್ಕಾರ ಈವರೆಗೂ ಸ್ಮಶಾನ ಭೂಮಿ ನೀಡದ ಕಾರಣ ಇದೀಗ ಸಿಎಂ ವಿರುದ್ಧ ಗ್ರಾಮಸ್ಥರು ಸಮರ ಸಾರಿದ್ದಾರೆ.
ಹೌದು ತಾಲೂಕಿನ ಕೃಷ್ಣಾಪುರ ಎಂಬ ಗ್ರಾಮದಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯದ ಜನರು ಹೆಚ್ಚಾಗಿದ್ದಾರೆ. ಇಲ್ಲಿ ಯಾರಾದರೂ ಮೃತಪಟ್ಟರೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ಸ್ಥಳವಿಲ್ಲದ ಕಾರಣ ರಸ್ತೆಯಲ್ಲಿ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿವೆ. ಆದ್ದರಿಂದ ಅನೇಕ ಬಾರಿ ಸರ್ಕಾರಕ್ಕೆ ಹಾಗೂ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು ಈವರೆಗೂ ಸ್ಮಶಾನ ಜಾಗ ನಮಗೆ ಸಿಕ್ಕಿಲ ಎಂದು ಗ್ರಾಮಸ್ಥರು ಅಳಲು.
ಇಂತಹ ಸಮಸ್ಯೆ ಯಾರಿಗೂ ಬೇಡ ಎಂದು ಮೇ.04 ರಂದು ಹಾವೇರಿ ಪ್ರವಾಸ ಮಾಡುತ್ತಿರುವ ಸಿಎಂ ಸಿದ್ದ ರಾಮಯ್ಯ ವಿರುದ್ಧ ಕಪ್ಪು ಪಟ್ಟಿ ತೋರಿಸುವ ಮೂಲಕ ನಮ್ಮ ಸಮಸ್ಯೆ ಹೇಳಲಿದ್ದೇವಿ ಎಂದು ರೈತ ಮುಖಂಡ ರವಿಂದ್ರಗೌಡ ಪಾಟೀಲ ತಿಳಿಸಿದ್ದಾರೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.