ರಾಣೆಬೆನ್ನೂರ: ತಂದೆ ಸಾವಿನ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಅಣ್ಣ-ತಂಗಿಗೆ ಉತ್ತಮ ಅಂಕ ದೊರೆತಿದೆ.
ತಾಲೂಕಿನ ಪದ್ಮಾವತಿಪುರ ತಾಂಡದ ( ಬಸಲಿಕಟ್ಟಿ ತಾಂಡ) ರಕ್ಷಿತಾ ಹನುಮಂತಪ್ಪ ಲಮಾಣಿ ಮತ್ತು ಧನರಾಜ ಹನುಮಂತಪ್ಪ ಲಮಾಣಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು.
ತಂಗಿ ರಕ್ಷಿತಾಗೆ ಶೇ. 83 ಅಂಕ ದೊರೆತಿದ್ದರೆ, ಅಣ್ಣ ಧನರಾಜನಿಗೆ ಶೇ. 85ರಷ್ಟು ಅಂಕ ದೊರೆತಿದೆ.
ಇವರ ತಂದೆ ಹನುಮಂತಪ್ಪ ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಪರೀಕ್ಷೆ ದಿನದಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆಯ ಶವ ಮನೆಯಲ್ಲಿದ್ದರೂ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದು ಬಂದಿದ್ದರು.
ಮಕ್ಕಳು ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ