ರಾಣೆಬೇನ್ನೂರು: ಜಮೀನಿನ ಎನ್ ಎ ಅಭಿವೃದ್ಧಿ ಪಡಿಸಿದ ಪ್ಲಾಟ್ ಗಳ ಇಸ್ವತ್ತು ನೀಡಲು ನಾಲ್ಕೂವರೆ ಲಕ್ಷ ಲಂಚ ಕೇಳಿ ನಂತರ ನಾಲ್ಕು ಲಕ್ಷ ಲಂಚ ಪಡೆಯುವಾಗ ಗ್ರಾಪಂ ಪಿಡಿಓ, ಉಪಾಧ್ಯಕ್ಷ ಸೇರಿ ಮೂವರು ಸದಸ್ಯರನ್ನ ಲೋಕಾಯುಕ್ತ ಪೋಲಿಸರ ಬಂಧಿಸಿದ್ದಾರೆ.
ತಾಲೂಕಿನ ಹಲಗೇರಿ ಗ್ರಾಮದಲ್ಲಿರುವ ಹಲಗೇರಿ ಗ್ರಾಪಂ ಪಿಡಿಓ ಕೆ.ಮಂಜುನಾಥ ಅವರು ಇಸ್ವತ್ತು ನೀಡಲು ಜಮೀನು ಮಾಲೀಕರಾದ ನವೀನ ಅಂದನೂರು ಹತ್ತಿರ ಒಂದು ಲಕ್ಷ ಲಂಚ ಪಡೆದಿದ್ದರು. ನಂತರ ಉಳಿದ ನಾಲ್ಕೂವರೆ ಲಕ್ಷ ಹಣ ನೀಡುವಂತೆ ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಸದಸ್ಯರಾದ ಸೋಮಶೇಖರ್ ಕನ್ನಪ್ಪಳವರ, ಪ್ರಸನ್ನ ಬಣಕಾರ ಹಾಗೂ ಸೈಯದ್ ರೆಹಮಾನ್ ಕರ್ಜಗಿ ಜಮೀನಿನ ಮಾಲೀಕನ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ನವೀನ ಅವರು ನಾಲ್ಕು ಲಕ್ಷ ನೀಡಲು ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿದಿದೆ.
ನಂತರ ನವೀನ ಅವರು ಲೋಕಾಯುಕ್ತ ಪೋಲಿಸರಿಗೆ ದೂರು ನೀಡಿ ಆರೋಪಿಗಳನ್ನ ಬಂಧಿಸಿದ್ದಾರೆ.
ಕಾರ್ಯಾಚರಣೆ ಸಮಯದಲ್ಲಿ ದಾವಣಗೇರಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ಸಿ ಮಾರ್ಗದರ್ಶನ ಮೂಲಕ ಕಾರ್ಯಾಚರಣೆ ಮಾಡಿದ ಪೋಲಿಸ್ ನಿರೀಕ್ಷಕರಾದ ಬಸವರಾಜ ಹಳಬಣ್ಣನವರ, ಸಿಬ್ಬಂದಿಗಳಾದ ಸಿ.ಎಮ್. ಬಾರ್ಕಿ, ಎಂ.ಕೆ.ನದಾಪ್ ಸೇರಿದಂತೆ ಇತರ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನ ವಶಪಡಿಸಿಕೊಂಡ ಕಾನೂನಿಗೆ ಒಪ್ಪಿಸಿದ್ದಾರೆ.
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಸ್ಥಾಯಿ ಸಮಿತಿ ರಚನೆ ನಗರಸಭೆಯಲ್ಲಿ ಕೋಲಾಹಲ ವಿರೋಧ ಪಕ್ಷದ ಸದಸ್ಯರಿಂದ ನ್ಯಾಯಾಲಯದ ಮೋರೆ ಸಾಧ್ಯತೆ