ರಾಣೇಬೆನ್ನೂರು: ತೊಟ್ಟಿಲು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ೪ ಜನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ತುಮ್ಮಿನಕಟ್ಟಿ ಮುಖ್ಯ ರಸ್ತೆಯ ನಿಟ್ಟೂರು ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಗೋಡಿಹಾಳ ಗ್ರಾಮದ ಅಶೋಕ ಸಿದ್ದಪ್ಪ ಮಾಗನೂರ (೫೬), ಜಗದೀಶ ಸಿದ್ದಪ್ಪ ಮಾಗನೂರ (೫೦) ಎಂದು ಗುರುತಿಸಲಾಗಿದೆ.
ಇವರು ಗೋಡಿಹಾಳ ಗ್ರಾಮದಿಂದ ಹರಿಹರಕ್ಕೆ ‘ನಾಮಕರಣ’ಕ್ಕೆ ಟ್ರಾö್ಯಕ್ಟರ್‌ನಲ್ಲಿ ತೆರಳುವ ಸಂದರ್ಭದಲ್ಲಿ ಟ್ರಾö್ಯಕ್ಟರ್‌ನ ಟ್ರೆöÊಲರ್ ಹಿಂದೆ ಕುಳಿತಿದ್ದ ಡೋರ್ (ಪಾಲ್ಕಾ) ಮುಗುಚಿ ಬಿದ್ದಿದ್ದರ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ರಾಣೇಬೆನ್ನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ