16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಗ್ಯಾರಂಟಿ ಯೋಜನೆ ವಿರೋಧಿಸಲ್ಲ, ಬಂದ್ ಮಾಡಿದ್ರ ಹೋರಾಟ ಮಾಡ್ತೇವಿ: ಜಿಲ್ಲಾಧ್ಯಕ್ಷ ಪೂಜಾರ.

 

ರಾಣೆಬೇನ್ನೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಯನ್ನು ನಾವು ವಿರೋಧ ಮಾಡಲ್ಲ ಆದರೆ ಬಂದ್ ಮಾಡಿದ್ರೆ ಬಿಜೆಪಿ ಪಕ್ಷದಿಂದ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

 

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿತ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಹಿಂದುಳಿದ ನಾಯಕರಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ಆದರೆ ಹಿಂದುಳಿದ, ದಲಿತ ಜನರಿಗೆ ಏನು ನೀಡದೆ ಅಲ್ಪಸಂಖ್ಯಾತರಿಗೆ ಮಣೆ ಹಾಕಲಾಗಿದೆ.

ಈ ಸರಿ ಬಜೆಟ್ ಒಳಗೆ ಜಿಲ್ಲೆಯ ಆರು  ಜನ ಕಾಂಗ್ರೆಸ್ ಶಾಸಕರು ಇದ್ದರು ಏನು ಯೋಜನೆ ಘೋಷಣೆ ಮಾಡಿಲ್ಲ ಆದರೆ ಸಿಎಂಗೆ ಗೆಲುವು ನೀಡಿದ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ರೈತರಿಗೆ ಅನುಕೂಲಕ್ಕೆ ಯಾವುದೇ ಯೋಜನೆ ನೀಡಿಲ್ಲ ಎಂದರು.

ನಮ್ಮ ಬಿಜೆಪಿ ಸರ್ಕಾರದ ಇದ್ದ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರು ನೀರಾವರಿಗೆ ಹೆಚ್ಚು ಒತ್ತು ನೀಡಿದ್ದರು, ಯಾವುದೇ ಪರಿಹಾರ ಇದ್ದರೂ 24 ಗಂಟೆಯೊಳಗೆ ಬರಪರಿಹಾರ ಹಾಗೂ ಬೆಳೆಹಾನಿ‌ ಪರಿಹಾರ ನೀಡಿದ್ದು ‌ನಮ್ಮ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದೇ ಪರಿಹಾರ ನೀಡದೆ ರೈತರನ್ನು ನಿರ್ಲಕ್ಷ್ಯ ಮಾಡಿದೆ.

ಇನ್ನೂ ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆ ಗೆ ಹಣ ಹೊಂದಿಸಲು ಆಗುತ್ತಿಲ್ಲ. ಆದರೆ ದಲಿತರಿಗೆ ಮೀಸಲಾಗಿ‌ ಇಟ್ಟಿದ್ದ ಎಸ್ಸಿಪಿ-ಟಿಎಸ್ಪಿ ಯೋಜನೆಯ ಸುಮಾರು ‌ಇಪ್ಪತ್ತು ನಾಲ್ಕೂವರೆ ಸಾವಿರ ಕೋಟಿ ಹಣವನ್ನು ಬಳಕೆ ಮಾಡಿಕೊಂಡು ದಲಿತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

 

ರಾಣೆಬೇನ್ನೂರು ನಗರ ಅಭಿವೃದ್ಧಿಗೆ ನಾನು ಇದ್ದ ಸಮಯದಲ್ಲಿ ನಗರೊತ್ಥಾನ ಯೋಜನೆ ಅಡಿಯಲ್ಲಿ ಸುಮಾರು ‌40 ಕೋಟಿ ಹಣವನ್ನು ತರಲಾಗಿದೆ. ಅದ ಹಣದಿಂದ ಇದೀಗ ಕಾಮಗಾರಿ ಮಾಡುತ್ತಿದ್ದಾರೆ. ಆದರೆ ಈವರೆಗೂ ನಮ್ಮ ನಗರಸಭೆಗೆ ಒಂದು ರೂಪಾಯಿ ಅನುದಾನವನ್ನು ನೀಡಿಲ್ಲ ಎಂದು ತಿಳಿಸಿದರು.

 

ಇನ್ನೂ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ(ಮಣಿ) ನಗರದಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಪಿ.ಬಿ.ರಸ್ತೆಯ ಆಯತ್ ಹೊಟೆಲ್ ಹಾಗೂ ಎಡಿಬಿ ರಸ್ತೆಯ ಹಣ್ಣಿನ ಅಂಗಡಿಗಳನ್ನು ಒಂದು ವಾರದಲ್ಲಿ ತೆರವು ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿ ಸಮಯದಲ್ಲಿ ಮುಖಂಡರಾದ ನಿಂಗರಾಜ ಕೋಡಿಹಳ್ಳಿ, ಸಿದ್ದಣ್ಣ ಚಿಕ್ಕಬಿದರಿ, ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ರಮೇಶ್ ಕರಡೆಣ್ಣನವರ, ರಾಯಣ್ಣ ಮಾಗನೂರು ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!