ರಾಣೆಬೇನ್ನೂರು: ತಾಲೂಕಿನ ಮೆಡ್ಲೇರಿ ಭಾಗದಲ್ಲಿ ಕುರಿಗಾರರ ದೊಡ್ಡಿಯ ಮೇಲೆ ಹಾಕಿರುವ ಚಿರತೆ ಒಂದೇ ವಾರದಲ್ಲಿ ಸುಮಾರು ಐವತ್ತು ಕುರಿಗಳ ಮೇಲೆ ದಾಳಿ ಮಾಡಿ ಸಾಯಿಸಿದೆ.
ಹೌದು ಸುಮಾರು ಮೂರು ವಾರದಿಂದ ಮೆಡ್ಲೇರಿ ಹೊರಭಾಗದ ಜಮೀನು ಸೇರಿದಂತೆ ಇತರೆ ಕಡೆ ದೊಡ್ಡಿ ಹಾಕಿಕೊಂಡಿರುವ ಕುರಿಗಾರರ ಕುರಿಗಳ ಮೇಲೆ ಚಿರತೆ ಸತತವಾಗಿ ದಾಳಿ ಮಾಡುತ್ತಿದೆ. ಇದರಿಂದ ಲಕ್ಷಾಂತರ ಮೌಲ್ಯದ ಕುರಿ ಕಳೆದುಕೊಂಡ ಕುರಿ ಮಾಲೀಕರು ಕಂಗಾಲಾಗಿದ್ದು, ದಿನ ನಿತ್ಯವೂ ಕಣ್ಣೀರ ಹಾಕುವ ಪರಿಸ್ಥಿತಿ ಬಂದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಚ್ಚರಿಕೆ ಇರುವಂತೆ ಸೂಚನೆ ನೀಡುತ್ತಾರೆ ಹೊರತು ಚಿರತೆ ಸೆರೆ ಹಿಡಿಯುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ. ಇನ್ನೂ ಕುರಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಲು ಸಹ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಕುರಿ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.
ಕೂಡಲೇ ತಾಲೂಕಿನ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮೆಡ್ಲೇರಿ ಭಾಗದಲ್ಲಿ ಸತತವಾಗಿ ದಾಳಿ ಮಾಡುವ ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳಿಯ ಮುಖಂಡ ಸುರೇಶ ಬಿಲ್ಲಾಳ ಆಗ್ರಹ ಮಾಡಿದ್ದಾರೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.