ರಾಣೆಬೇನ್ನೂರು: ಬಾರಿ ಗಾಳಿಗೆ ನಗರದ ಹಳೆ ಪಿಬಿ ರಸ್ತೆಯಲ್ಲಿ ಇತ್ತೀಚಿಗೆ ಅಳವಡಿಸಿದ ಲೈಟಿನ ಕಂಬಗಳು ಮುರಿದ ಬಿದ್ದ ಘಟನೆ ನಡೆದಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ.

ಹೌದು ಕಳೆದ ವರ್ಷ ಲೋಕೋಪಯೋಗಿ ಇಲಾಖೆಯು ನಗರದ ಎನ್.ವಿ.ಹೊಟೇಲ್ ನಿಂದ ತರಳಬಾಳು ಇಂಜಿನೀಯರಿಂಗ್ ಕಾಲೇಜ್ ವರಗೆ ಸುಮಾರು ಇಪ್ಪತ್ತು ಕೋಟಿ ಖರ್ಚು ಮಾಡಿ ದ್ವೀಪಥ ರಸ್ತೆ ದುರಸ್ತಿ ಹಾಗೂ ನೂತನ ಲೈಟಿನ ಕಂಬಗಳ ಅಳವಡಿಕೆ ಮಾಡಲಾಗಿತ್ತು.
ಆದರೆ ಒಂದು ವರ್ಷದಲ್ಲಿ ಇದೀಗ ಕಂಬಗಳು ಮುರಿದು ಬಿದ್ದಿದ್ದು, ಕಳಪೆ ಮಟ್ಟದ ಕಂಬಗಳನ್ನು ಅಳವಡಿಕೆ ಮಾಡಲಾಗಿದೆ ಎಂಬು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಒಂದು ಕಾಮಗಾರಿಯನ್ನು ಗುತ್ತಿಗೆದಾರರಾದ ಎಸ್.ಆರ್.ಬಳ್ಳಾರಿ ಅವರು ಮಾಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಕುರಿತು ಲೋಕೋಪಯೋಗಿ ಇಲಾಖೆಯ ಎಇಇ ಗೆ ಮಾಹಿತಿ ಕೇಳಲು ಕರೆಯನ್ನು ಮಾಡಿದರೆ ಸ್ವೀಕಾರ ಮಾಡದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.