ರಾಣೆಬೇನ್ನೂರು: ತಾಲೂಕಿನ ಗ್ರಾಮೀಣ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ ಒಬ್ಬ ಯುವತಿ ಹಾಗೂ ಇಬ್ಬರು ಯುವಕರು ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿವೆ.
ತಾಲೂಕಿನ ಮೆಡ್ಲೇರಿ ಗ್ರಾಮದ ಕೀರ್ತಿ ಮಹೇಂದ್ರಪ್ಪ ಚಲವಾದಿ(22) ಎಂಬ ಯುವತಿ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋದವಳು ಈವರೆಗೆ ಬಂದಿಲ್ಲ ಎಂದು ತಂದೆ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಆರೇಮಲ್ಲಾಪುರ ಗ್ರಾಮದ ಚಂದ್ರಪ್ಪ ಬೇವಿನಮರದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೋದವನು ನಾಪತ್ತೆಯಾದರೆ ಚಿಕ್ಕಹರಳಳ್ಳಿ ಗ್ರಾಮದ ಇನ್ನೊರ್ವ ಯುವಕ ವಸಂತಕುಮಾರ ಲಮಾಣಿ ಸಹ ಜೆಸಿಬಿ ಕೆಲಸಕ್ಕೆ ಹೋದವನು ಮನೆಗೆ ಬಂದಿಲ್ಲ ಎಂದು ಅವರ ಪಾಲಕರು ಪ್ರಕರಣ ದಾಖಲಿಸಿದ್ದಾರೆ.
ಈ ಮೂವರು ಎಲ್ಲಿಯಾದರೂ ಕಂಡು ಬಂದರೆ ಕೂಡಲೇ ರಾಣೆಬೇನ್ನೂರು ಗ್ರಾಮೀಣ ಪೋಲಿಸ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.