ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ

ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!

ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.

ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”

ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ‌ ಪ್ರಕಾಶ ಕೋಳಿವಾಡ,

ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು‌‌ ಮೇಳ.

ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!

ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.

ಯಕಲಾಸಪುರ ಗ್ರಾಮ ಚಿರತೆಗಳ ತಾಣ, ಹೆಣ್ಣು ಚಿರತೆ ಮರಿಗಳಿಗೆ ಜನ್ಮ ನೀಡಿರುವ ಹಾಕಿರುವ ಶಂಕೆ…

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ನೌಕರ ಸಾವು.

ಸಂತೋಷಕುಮಾರ ಪಾಟೀಲಗೆ Z ಕನ್ನಡ ನ್ಯೂಸ್ ವತಿಯಿಂದ ಯುವರತ್ನ ಪ್ರಶಸ್ತಿ.

ಸ್ವಚ್ಛ ಕೈಯಿಂದ ಕೆಲಸ ಮಾಡಿ‌ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.

ನಾಳೆ ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ..

ಇಸ್ಪೀಟು ಅಡ್ಡೆ ಮೇಲೆ ಹಲಗೇರಿ ಪೋಲಿಸರ ದಾಳಿ, ಹತ್ತು ಜನರು ಮೇಲೆ ಪ್ರಕರಣ

ಬೆಟ್ಟ ಮಲ್ಲಪ್ಪನ ಗುಡ್ಡ ಇನ್ನೂ ಪ್ರವಾಸಿ ತಾಣ ಸಚಿವ ಹೆಚ್.ಕೆ.ಪಾಟೀಲ.

ರಾಹುಲ್ ಗಾಂಧಿ ಖಾಲಿ ಸಂವಿಧಾನ‌ ಬುಕ್ ಇಟ್ಟಕೊಂಡು ಓಡಾಡುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನನ್ನ ವಿರುದ್ಧ ಆರೋಪ‌ ಮಾಡಿರುವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವೆ ಸಿದ್ಧಾರೂಢ‌ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ..

ಕಳಪೆ ಬೀಜ ಮಾರಾಟ ಮಾಡಿದ್ದ ಐದು ಅಂಗಡಿಗೆ ಬೀಗ ಮುದ್ರೆ…!

ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.

ತಾಲೂಕಿನ ಒಂದೇ ದಿನ ಮೂರು ಸಾವಿನ ಪ್ರಕರಣಗಳು ದಾಖಲು..! ಘಟನೆಗಳು ಎಲ್ಲೇಲಿ?

ಶಿಕ್ಷಕರು ತಮ್ಮ ಮಕ್ಕಳಂತೆ ಬಡವರ ಮಕ್ಕಳಿಗೆ ಶಿಕ್ಷಣ ನೀಡಬೇಕು ಶಾಸಕ ಪ್ರಕಾಶ ಕೋಳಿವಾಡ.

ರಾಣೆಬೇನ್ನೂರು: ಶಿಕ್ಷಕರನ್ನು ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲಿ ಪರಮಾತ್ಮಕ್ಕೆ ಹೋಲಿಸಲಾಗಿದ್ದು, ಅವರು ನಮ್ಮನ್ನು ತಿದ್ದಿ ತಿಡಿದ ಸೃಷ್ಟಿಕರ್ತರು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣೆಬೇನ್ನೂರು ನಗರದಲ್ಲಿ ಭಾನುವಾರದಂದು ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ತಾಲೂಕ ಶಿಕ್ಷಕರ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಕೆಲಸ ಸಮಾಜದಲ್ಲಿ ಪವಿತ್ರವಾದ ಕೆಲಸವಾಗಿದ್ದು,  ಅದನ್ನು ನಿಯತ್ತಿನ ಮೂಲಕ ಮಾಡಿದರೆ ದೇಶವನ್ನು ಹೊಸ ಸೃಷ್ಟಿ ‌ಮಾಡಿದಂತೆ. ಭಾರತವನ್ನು ಮಾದರಿ ರಾಷ್ಟ್ರವನ್ನಾಗಿ ಮಾಡಲು ಶಿಕ್ಷಕರ ಕೆಲಸ ಬಹಳ ಪ್ರಮುಖವಾಗಿದ್ದು ಅದನ್ನು ದೇವರ ಕೆಲಸ ಎಂದು ಭಾವಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ಶಿಕ್ಷಕರ ತಮ್ಮ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರಾಗಿ ಮಾಡಿದರೆ ಬಡವರು ಮಕ್ಕಳು ಯಾವಾಗ ಆಗಬೇಕು. ಇದನ್ನು ಶಿಕ್ಷಕರು ಅರಿತು ಅವರಿಗೂ ಸಹ ತಮ್ಮ ಮಕ್ಕಳಂತೆ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಿ ಪ್ರತಿಭಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು .

ಶಿಕ್ಷಕರು ಇತ್ತಿಚಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಮುಂದಿನ ದಿನಗಳಲ್ಲಿ ಕೇವಲ ಡಾಕ್ಟರ್, ಇಂಜಿನಿಯರ್ ಮಾಡಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಅದರ ಬದಲಾಗಿ ಅವರನ್ನು ವಿಮಾನ ಚಾಲಕರು, ರೈಲು ಚಾಲಕರನ್ನಾಗಿ ಮಾಡಲು ಪ್ರೇರಣೆ ನೀಡಬೇಕು. ಏಕೆಂದರೆ ವಿಮಾನ ನಡೆಸುವ ಪೈಲಟ್ ಗೆ ತಿಂಗಳಿಗೆ ಆರು ಲಕ್ಷ ನೀಡುತ್ತಾರೆ ಆದರೆ ನನಗೆ ಶಾಸಕನಾದರೆ ಕೇವಲ ನಲವತ್ತು ಸಾವಿರ ಸಂಬಳ ನೀಡುತ್ತಾರೆ ಎಂದು ವಿವರಿಸಿದರು.

ಶಿಕ್ಷಕರ ಪತ್ತಿನ ಸಹಕಾರ ಸಂಘವು ಉತ್ತಮ ಸಾಧನೆ ಮಾಡಿದ್ದು, ಹಲವು ಶಿಕ್ಷಕರಿಗೆ ಸಂಘದ ಮೂಲಕ ಸಾಲ ನೀಡಿ ಅವರನ್ನು ಸದೃಢರನ್ನಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಘಕ್ಕೆ ನನ್ನ ಕೈಯಿಂದ ಆದಂತಹ ಸಹಕಾರ ಸಲಹೆ ನೀಡುವೆ ಎಂದು ಶಿಕ್ಷಕರಿಗೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗನಗೌಡ ರಾಮನಗೌಡ್ರ, ಶಿಕ್ಷಕರಾದ ಮಂಜನಾಯ್ಕ ಎಲ್. ಸಿ.ಎ.ಅಡಿವೇರ, ಬಿ.ಎಫ್.ದೊಡ್ಡಮನಿ, ಪ್ರಭಾಕರ ಚಿಂದಿ, ನಾಗರತ್ನ ಹಂಚಿನಮನಿ, ಎಸ್.ವಿ.ದೊಡ್ಡಮನಿ, ಎಂ.ಸಿ.ಬಲ್ಲೂರು, ಆನಂದ ಏಳುಕುರಿ ಸೇರಿದಂತೆ ಇತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗನಗೌಡ ರಾಮನಗೌಡ್ರ, ಶಿಕ್ಷಕರಾದ ಮಂಜನಾಯ್ಕ ಎಲ್. ಸಿ.ಎ.ಅಡಿವೇರ, ಬಿ.ಎಫ್.ದೊಡ್ಡಮನಿ, ಪ್ರಭಾಕರ ಚಿಂದಿ, ನಾಗರತ್ನ ಹಂಚಿನಮನಿ, ಎಸ್.ವಿ.ದೊಡ್ಡಮನಿ, ಎಂ.ಸಿ.ಬಲ್ಲೂರು, ಆನಂದ ಏಳುಕುರಿ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!