ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಮುದ್ರಣ ಹಾಗೂ ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ: ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು

ರಾಣೇಬೆನ್ನೂರು :- ಮುದ್ರಣ ಹಾಗೂ ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಹೇಳಿದರು.
ನಗರದ ಚರ್ಚ್ ರಸ್ತೆಯ ಎಸ್‌ಜೆಎಂವಿ ಪದವಿ ಮಹಿಳಾ ಮಹಾವಿದ್ಯಾಲಯದ ಡಾ.ಶಿ.ಮು.ಶ ಸಭಾಭವನದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
     ಪತ್ರಿಕೆಗಳು ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತವೆ. ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪತ್ರಿಕೆಗಳು ಬಹುಮುಖ್ಯ ಪಾತ್ರ ವಹಿಸಿದ್ದವು. ಪತ್ರಿಕೆಗಳು ಜ್ಞಾನ ಹಂಚಿಕೆ ಮತ್ತು ನೀತಿಯನ್ನು ಕಲಿಸುತ್ತವೆ. ಪತ್ರಕರ್ತರು ಸಮಾಜದ ಒಂದು ಅಂಗವಾಗಿದ್ದು ಪ್ರಜೆಗಳ ರಕ್ಷಣೆ ಕಾರ್ಯ ನಿರ್ವಹಿಸುತ್ತಾರೆ. ಯುವ ಜನಾಂಗ ಕೇವಲ ಮನರಂಜನೆಗೆ ಒತ್ತು ನೀಡದೇ ಜೀವನ ರೂಪಿಸುವ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜಕ್ಕೆ ಮುದ್ರಣ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಂದಾಗಿ ಪತ್ರಿಕೆಗಳನ್ನು ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ನಾಡಿನ ಅಭ್ಯುದಯದಲ್ಲಿ ಪತ್ರಿಕೆಗಳ ಪಾತ್ರ ಬಹು ಮುಖ್ಯ. ಯುವ ಜನಾಂಗ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಂತೋಷ ಕುಮಾರ ಪಾಟೀಲ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬದಲಾವಣೆ ಪರ್ವ ಪ್ರಾರಂಭವಾಗಿದ್ದು ಸಾಮಾಜಿಕ ಚಿಂತನೆ ದೂರವಾಗಿದೆ. ಇದರಿಂದ ಪತ್ರಕರ್ತರ ಕಾರ್ಯಶೈಲಿ ಮೇಲೆ ಪರಿಣಾಮ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಹೊಂದಿದ ಪತ್ರಕರ್ತರು ಸಂಕಷ್ಟ ಎದುರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರು ಆರ್ಥಿಕ ಬಲಿಷ್ಠರಾಗುವಂತಾಗಬೇಕು ಎಂದರು.
ಶಹರ ಸಿಪಿಐ ಡಾ.ಶಂಕರ್ ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜಾಲತಾಣಗಳ ಕುರಿತು ಮಾತನಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ, ಎಸ್.ಜೆ.ಎಂ.ವಿ ಮಹಿಳಾ ಪದವಿ ಕಾಲೇಜಿನ ಪ್ರಾ. ಡಾ.ಆರ್.ವ್ಹಿ. ಹೆಗಡಾಳ, ಕಾನಿಪ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ, ಜಿಲ್ಲಾ ಕಾರ್ಯದರ್ಶಿ ಸಂತೋಷಕುಮಾರ ಮಹಾಂತಶೆಟ್ಟರ, ಜಿಲ್ಲಾ ಉಪಾಧ್ಯಕ್ಷ ಎಸ್.ಜಿ.ಮಹಾನುಭಾವಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಗರದ ಎಸ್‌ಟಿಜೆಐಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಬರಹಗಾರ ಡಾ.ಎಮ್.ಈ. ಶಿವಕುಮಾರ ಹೊನ್ನಾಳಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ತಾಲೂಕ ಕಾನಿಪ ಸಂಘದ ಅಧ್ಯಕ್ಷ ಎಸ್.ಟಿ.ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪಿ.ರಾಮಯ್ಯ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಪತ್ರಕರ್ತ ಮನೋಹರ ಮಲ್ಲಾಡದ ಅವರನ್ನು ಸನ್ಮಾನಿಸಲಾಯಿತು.
ತಾಲೂಕ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೊಸಪೇಟಿ, ಉಪಾಧ್ಯಕ್ಷ ಕರಿಯಪ್ಪ ಅರಳಿಕಟ್ಟಿ, ಖಜಾಂಚಿ ಗುರುರಾಜ ನಾಡಿಗೇರ, ಕೆ.ಎಸ್.ನಾಗರಾಜ, ಎಂ.ಚಿರAಜೀವಿ, ಮಂಜುನಾಥ ಕುಂಬಳೂರ, ಶಿವಕುಮಾರ ಓಲೇಕಾರ, ಮಲ್ಲಿಕಾರ್ಜುನ ಕೆಂಚರೆಡ್ಡಿ, ಬಸವರಾಜ ಒಡೇರಹಳ್ಳಿ, ಗದಿಗೆಪ್ಪ ನೇಶ್ವಿ, ಮುರುಗೇಶ ಮಹಾನುಭಾವಿಮಠ, ಮುಕ್ತೇಶ ಕೂರಗುಂದಮಠ, ವಿಶ್ವನಾಥ ಕುಂಬಳೂರ, ಮಾಣಿಕಲಾಲ್ ಮೆಹರವಾಡೆ, ಬಸವರಾಜ ಸರೂರ, ಸುಮಿತ್ ಮಳಿಯೆ, ಗಿರೀಶ ಅಮ್ಮನವರ ಮತ್ತಿತರರಿದ್ದರು.
ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!