ರಾಣೆಬೇನ್ನೂರು: ಅಧಿಕವಾಗಿ ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಯುವಕರು ರಸ್ತೆಯ ಡಿವೈಂಡರಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ತಡರಾತ್ರಿ ನಗರದ ನೇಕಾರ ಕಾಲೋನಿ ಬಳಿ ನಡೆದಿದೆ.
ಹರಳಯ್ಯ ನಗರದ ನಂದನ ಶಿವಪ್ಪನವರ(22), ವೈಭವ ಪಟ್ಟಣ್ಣಶೆಟ್ಟಿ (22) ಮೃತಪಟ್ಟ ಯುವಕರು.

ತಡರಾತ್ರಿ ಪಾರ್ಟಿಗೆ ತೆರಳಿದ ಯುವಕರು ಮುಗಿಸಿಕೊಂಡು ವಾಪಾಸು ಬರುವಾಗ ಬೈಕ್ ನಿಯಂತ್ರಣ ತಪ್ಪಿದೆ. ಈ ಸಮಯದಲ್ಲಿ ನೇಕಾರ ಕಾಲೋನಿ ಬಳಿವಿರುವ ಹಳೆ ಪಿ.ಬಿ.ರಸ್ತೆಯ ಡಿವೈಂಡರಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ರಾಣೆಬೇನ್ನೂರು ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.