ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಡಿಸಿ ಸಾಹೇಬ್ರೆ, ಶಾಸಕರೆ ನಮಗೆ ಕಾಡುಹಂದಿಗಳ ಕಾಟ ಸಾಕಾಗಿದೆ, ಪರಿಹಾರ ಕೋಡ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ರೈತನ ಅಳಲು..!

oplus_0

ರಾಣೆಬೇನ್ನೂರು: ಮಳೆಯಿಲ್ಲದ ಸಮಯದಲ್ಲಿ  ಸುಮಾರು ಐವತ್ತು ಸಾವಿರ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನಿ ಆದರೆ ಅರಣ್ಯ ಇಲಾಖೆಯ ಕಾಡು ಮೃಗಗಳ ಹೊಲ ನಾಶ ಮಾಡಿ ಮೆಕ್ಕೆಜೋಳ ತಿಂದು ನನಗೆ ನಷ್ಟ ಉಂಟು ಮಾಡಿದ್ದು,  ಪರಿಹಾರ ನೀಡಬೇಕು ಎಂದು ಚಳಗೇರಿ ಗ್ರಾಮದ ರೈತನೊರ್ವ ಡಿಸಿ‌ ಹಾಗೂ ಶಾಸಕರ ಮುಂದೆ ಅಳಲು ತೋಡಿಕೊಂಡರು.

ರಾಣೆಬೇನ್ನೂರು ನಗರದ ತಾಪಂ ಸಭಾಭವನದಲ್ಲಿ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡು ಬಂದಿತು.

ಮುಂಗಾರು ಸಮಯದಲ್ಲಿ ಕಾಡಂಚಿನ ಹತ್ತಿರ ಇರುವ ಜಮೀನಿನಲ್ಲಿ ರೈತರು ಸಾಲ ಮಾಡಿ ಬಿತ್ತನೆ ಮಾಡಿರುತ್ತಾರೆ. ಆದರೆ ಕಾಡು ಹಂದಿಗಳು, ಕೃಷ್ಣಮೃಗಗಳು ಬೆಳೆ ನಾಶ ಮಾಡುತ್ತವೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು ನನಗೆ ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ನೀಡಿಸಿ ಎಂದು ಅಂಗಲಾಚಿದರು. ಇದಕ್ಕೆ ಡಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಕರಿಸಿ ಕೂಡಲೇ ಪರಿಹಾರ ನೀಡಬೇಕು ಜತೆಗೆ ಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಇನ್ನೂ ರಾಣೆಬೇನ್ನೂರು ನಗರದಲ್ಲಿ ನಗರಸಭೆ ಲೆಔಟ್ ನಿರ್ಮಾಣದಲ್ಲಿ ಬಾರಿ ಅಕ್ರಮ ನಡೆಯುತ್ತದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮನವಿ ಸಲ್ಲಿಸಿದರು. ತಾಲೂಕಿನ ರಾಹುತನಕಟ್ಟಿ ಗ್ರಾಮದ ರೈತನಿಗೆ ಕೇವಲ ಮೂರು ಎಕರೆ ಇದ್ದರೂ ತಹಸೀಲ್ದಾರ ಕಚೇರಿಯ ಅಧಿಕಾರಿಗಳು ಸಣ್ಣ ಹಿಡುವಳಿದಾರರ ಖಾತೆ ಬದಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಮಾಡಿದರು. ಕೂಡಲೇ ಶಾಸಕರ ತಹಸೀಲ್ದಾರ ಇಲಾಖೆಯ ಅಧಿಕಾರಿಗಳಿಗೆ ರೈತನ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಪದ್ಮಾವತಿಪುರ ತಾಂಡಾ ಕಂದಾಯ ಗ್ರಾಮವಾಗಿರಲಿಲ್ಲ ಆದರೆ ಇದೀಗ ಕಂದಾಯ ಗ್ರಾಮವಾಗಿದ್ದು, ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸದರು. ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಲೆಔಟ್ ಗಳಿಗೆ ಸರಿಯಾದ ಸೌಲಭ್ಯಗಳಿಲ್ಲ. ತಾಲೂಕಿನ ಕೆಲವೊಂದು ಬಾರ್ ಗಳಲ್ಲಿ ಸೌಲಭ್ಯಗಳಿಲ್ಲ ಅದನ್ನು ಸರಿಪಡಿಸಬೇಕು ಎಂದು ನಾಗರೀಕರು ಜಿಲ್ಲಾಧಿಕಾರಿಗೆ ಒತ್ತಾಯ ಮಾಡಿದರು.

ಮೇಡ್ಲೆರಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುವ ಮನೆಗಳ ತೆರವುಗೊಳಿಸಲಾಗಿದ್ದು, ಕುಟುಂಬಗಳು ಬೀದಿಗೆ ಬಿದ್ದಿದ್ದು ನಮಗೆ ವಾಸಿಸಲು ಜಾಗ ನೀಡಬೇಕು ಎಂದು ಹತ್ತಾರು ಮಹಿಳೆಯರು ಅಳಲು ತೊಡಿಕೊಂಡರು. ಮೆಡ್ಲೇರಿ ಗ್ರಾಮದಲ್ಲಿ ಜಲ್ ಜೀವನ ಮಷಿನ್ ಅಡಿ ಕೆಲಸ ಕಳಪೆಯಾಗಿದ್ದು, ಅದನ್ನು ಸರಿಪಡಿಸಲು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಉಪವಿಭಾಗಧಿಕಾರಿ ಚನ್ನಬಸಪ್ಪ, ಸಿಇಒ ಅಕ್ಷಯ ಶ್ರೀಧರ, ತಹಸೀಲ್ದಾರ ಗುರುಬಸವರಾಜ, ಇಓ ಸುಮಲತಾ, ಬಿಇಓ ಎಂ.ಎಚ್.ಪಾಟೀಲ, ಡಿಎಸ್ಪಿ ಡಾ.ಗಿರೀಶ್ ಬೋಜಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!