ರಾಣೆಬೇನ್ನೂರು: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುಮಾರು ಮೂರು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಅಭಿವೃದ್ಧಿ, ಆಡಳಿತ, ದೇಶ ರಕ್ಷಣೆ ಸಲುವಾಗಿ ಈ ಬಾರಿ ಜನರು ಮತ್ತೊಂದು ಬಾರಿ ಪ್ರಧಾನಿ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರಿಂದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಜನರು ಬಸವರಾಜ ಬೊಮ್ಮಾಯಿಗೆ ಮತ ನೀಡಲಿದ್ದು, ಸುಮಾರು ಮೂರು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಶತಸಿದ್ದ ಎಂದು ಅರುಣಕುಮಾರ ಪೂಜಾರ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಯು ಕೂಡ ನರೇಂದ್ರ ಮೋದಿ ಅವರಿಗೆ ಮತ ನೀಡಬೇಕು ಎಂದು ಮಾತನಾಡುತ್ತಿದ್ದು ಅವರು ಪ್ರಧಾನಿ ಆಗಿ ನೋಡಬೇಕು ಎಂಬ ಹುಮ್ಮಸ್ಸು ಇದೆ. ರೈತರಿಗೆ ನೀಡಿದ ಕಿಸಾನ್ ಸಮ್ಮಾನ ಯೋಜನೆ, ಬಡವರಿಗೆ ಆರೋಗ್ಯ ಯೋಜನೆ, ಅಭಿವೃದ್ಧಿ ಅವರ ಕೈ ಹಿಡಿಯಲಿದೆ ಎಂದರು.
ಹಾವೇರಿ ಜಿಲ್ಲಾದ್ಯಂತ ನಮ್ಮ ಕಾರ್ಯಕರ್ತರು ತಳಮಟ್ಟದ ಹೋಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಗೆಲುವಿಗೆ ಶ್ರಮಿಸುತ್ತಿರುವ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು ಸಲ್ಲಿಸುವೆ. ಹಾವೇರಿಯ ಜನರು ಬಸವರಾಜ ಬೊಮ್ಮಾಯಿ ಅವರ ಕೊಡುಗೆ ನೀಡಿದ ಹಿನ್ನೆಲೆ ಎಲ್ಲಾ ಎಸ್ಸಿ,ಎಸ್ಟಿ ಸಮುದಾಯ ಅವರ ಪರವಾಗಿ ನಿಂತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸುದ್ದಿಗೋಷ್ಠಿ ಸಮಯದಲ್ಲಿ ಮುಖಂಡರಾದ ಪರಮೇಶಣ್ಣ ಗೂಳಣ್ಣನವರ, ದೀಪಕ ಹರಪನಹಳ್ಳಿ, ರಮೇಶ ಗುತ್ತಲ, ಜಿ.ಜಿ.ಹೊಟ್ಟಿಗೌಡ್ರು, ಎ.ಬಿ.ಪಾಟೀಲ, ಭಾರತಿ ಜಂಬಗಿ ಸೇರಿದಂತೆ ಇತರರು ಹಾಜರಿದ್ದರು
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.