ರಾಣೆಬೇನ್ನೂರು: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾನ ದಿನಕ್ಕೆ ಇನ್ನೂ ಕೇವಲ ಎರಡು ದಿನ ಬಾಕಿ ಉಳಿದಿದ್ದು ಎರಡು ಪಕ್ಷದ ಅಭ್ಯರ್ಥಿಗಳು ಮತಗಳನ್ನು ಪಡೆಯಲು ಪ್ರಚಾರದ ಭರಾಟೆ ಜೋರು ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ನಡುವೆ ನೇರಾ ಹಣಾಹಣಿ ನಡೆದಿದ್ದು ತಾಲೂಕಿನಲ್ಲಿ ಎರಡರೇಡು ಬಾರಿ ಕ್ಷೇತ್ರ ಸುತ್ತಿ ಮತ ನೀಡುವಂತೆ ಮನವಿ ಮಾಡಿದ್ದಾರೆ. ಈ ನಡುವೆ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತಗಳನ್ನು ಪಡೆಯಬಹುದು ಎಂಬ ಚರ್ಚೆ ಸಹ ಕ್ಷೇತ್ರಾದ್ಯಂತ ಜೋರು ನಡೆದಿದ್ದು, ಹಲವರು ಹಲವು ರೀತಿಯ ವ್ಯಕ್ತಪಡಿಸುತ್ತಿದ್ದಾರೆ.
ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2.37.234 ಮತದಾರರು ಹೊಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 1.93.020 ಮತಗಳನ್ನು ಮತದಾರರು ಚಲಾವಣೆ ಮಾಡಿದ್ದರು. ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಈ ಬಾರಿ ಕಡಿಮೆ ಮತದಾನ ನಡೆಯುತ್ತದೆ ಎಂದು ಕ್ಷೇತ್ರದ ಜನರ ಮಾತುಗಳಾಗಿವೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೆಗೆದುಕೊಂಡು ಮತಗಳನ್ನು ಕ್ರೂಢಿಕರಣ ಮಾಡಿದರೆ ಅರುಣಕುಮಾರ ಪೂಜಾರ 62,030 ಮತಗಳನ್ನು ಪಡೆದಿದ್ದರು ಅಲ್ಲದೇ ಬಿಜೆಪಿ ಪಕ್ಷಕ್ಕೆ ಸೇರಿರುವ ಸಂತೋಷಕುಮಾರ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ 11,395 ಮತಗಳನ್ನು ಪಡೆದಿದ್ದರು ಹಾಗೂ ಜೆಡಿಎಸ್ ಅಭ್ಯರ್ಥಿ ಮಂಜುನಾಥ 5840 ಮತಗಳನ್ನು ಪಡೆದಿದ್ದರು. ಈಗ ಸಂತೋಷಕುಮಾರ ಹಾಗೂ ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಹಿನ್ನೆಲೆ 80 ಸಾವಿರ ಮತಗಳು ಬಿಜೆಪಿ ಪಾಲಾಗಲಿವೆ.
ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ 71,830 ಮತಗಳನ್ನು ಪಡೆಯುವ ಮೂಲಕ ರಾಣೆಬೇನ್ನೂರು ಶಾಸಕರಾಗಿ ಆಯ್ಕೆಯಾಗಿದ್ದರು.
ಈಗ ವಿಧಾನಸಭಾ ಚುನಾವಣೆಯಲ್ಲಿ ಎನ್ ಸಿ ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಾರು 37,559 ಮತಗಳನ್ನು ಪಡೆದಿದ್ದ ಆರ್.ಶಂಕರ್ ಕಾಂಗ್ರೆಸ್ ಸೇರಿದ್ದಾರೆ ಅವರ ಪಡೆದ ಮತಗಳು ಕಾಂಗ್ರೆಸ್ ತೆಕ್ಕೆಗೆ ಹೋಗಲಿವೆ ಎಂಬ ಮಾತುಗಳು ಜೋರಾಗಿ ಕೇಳಿ ಬಂದಿದೆ.
ಒಟ್ಟಾರೆ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಬಹಳ ಬಿರುಸಾಗಿ ನಡೆಯುತ್ತಿದ್ದ ಯಾರು ಎಷ್ಟು ಮತಗಳನ್ನು ಪಡೆಯುತ್ತಾರೆ ಎಂಬುದು ಜೂ.04 ಕ್ಕೆ ಗೊತ್ತಾಗಲಿದೆ.
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.