ರಾಣೆಬೇನ್ನೂರು: ತಾಲೂಕಿನ ಕವಲೆತ್ತು ಗ್ರಾಪಂನಲ್ಲಿ ಹೊಲಿಗೆ ಯಂತ್ರ ಖರೀದಿ, ಲ್ಯಾಪ್‌ಟಾಪ್ ಹಾಗೂ ಮೋಟರ್ ಯಂತ್ರ ಖರೀದಿ ಸೇರಿದಂತೆ ಇತರ ವ್ಯವಹಾರಗಳಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಸ್ವತಃ ಗ್ರಾಪಂ ಸದಸ್ಯರೇ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಗ್ರಾಪಂ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರ ಜೀವನೋಪಾಯಕ್ಕಾಗಿ ವಿಜಾರ 20 ಹೊಲಿಗೆ ಯಂತ್ರ ಫಲಾನುಭವಿಗಳಿಗೆ ನೀಡಿದ್ದಾರೆ. ಒಂದು ಹೊಲಿಗೆ ಯಂತ್ರಕ್ಕೆ 13,364 ರೂ.ನಂತೆ ಒಟ್ಟು 20 ಯಂತ್ರಗಳಿಗೆ 2,99,354 ರೂ. ನೀಡಲಾಗಿದೆ. ಆದರೆ, ಗ್ರಾಪಂ ಸದಸ್ಯರು ಅದೇ ಹೊಲಿಗೆ ಯಂತ್ರಗಳನ್ನು ಗ್ರಾಪಂ ಪಿಡಿಒ ಖರೀದಿಸಿದ ಅಂಗಡಿಗೆ ತೆರಳಿ 20 ಹೊಲಿಗೆ ಯಂತ್ರಗಳ ಕೋಟೇಷನ್ ತಂದಿದ್ದಾರೆ. ಅದರಲ್ಲಿ ಪ್ರತಿ ಯಂತ್ರಕ್ಕೆ 6800 ರೂ.ನಂತೆ ಒಟ್ಟು 20ಕ್ಕೆ 1,90,400 ನೀಡಲಾಗಿದೆ. ಹೀಗಾಗಿ ಹೊಲಿಗೆ ಯಂತ್ರ ಖರೀದಿಯಲ್ಲಿ ಗ್ರಾಪಂ ಪಿಡಿಒ ಅವ್ಯವಹಾರ ಮಾಡಿದ್ದಾರೆ ಎಂಬುದು ಗ್ರಾಪಂ ಸದಸ್ಯರ ಆರೋಪವಾಗಿದೆ.
ಲ್ಯಾಪ್‌ಟಾಪ್ ಖರೀದಿ ಗೋಲ್‌ಮಾಲ್:
ಗ್ರಾಪಂ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ವರ್ಗದ ವಿದ್ಯಾರ್ಥಿಯೊಬ್ಬರಿಗೆ ಲೆನೋವೊ ಕಂಪನಿಯ ಲ್ಯಾಪ್‌ಟಾಪ್
ಕೊಡಲಾಗಿದೆ. ಅದರ ಮಾರುಕಟ್ಟೆ ಬೆಲೆ 25,600 ರೂ. ಇದೆ. ಆದರೆ, ಗ್ರಾಪಂನಿಂದ 60 ಸಾವಿರ ರೂ. ಕೊಟ್ಟು ಖರೀದಿ ಮಾಡಲಾಗಿದೆ. ಅದರ ಜತೆಗೆ ಗ್ರಾಪಂ ಕಚೇರಿ ಉಪಯೋಗಕ್ಕಾಗಿ ಏಸಸ್ ಕಂಪನಿಯ ಲ್ಯಾಪ್‌ಟಾಪ್ ಖರೀದಿ ಮಾಡಲಾಗಿದೆ. ಅದರ ಮಾರುಕಟ್ಟೆ ಬೆಲೆ 22 ಸಾವಿರ ರೂ. ಇದೆ. ಗ್ರಾಪಂನಿಂದ 40990 ರೂ. ಕೊಟ್ಟು ಖರೀದಿ ಮಾಡಲಾಗಿದೆ.
ಗ್ರಾಪಂನಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹದೇವಪ್ಪ ಪೆದ್ದಪ್ಪನವರ ಎಂಬುವರು ಅವರ ಶಾಲೆಯ ದಾಖಲಾತಿಯಲ್ಲಿರುವ ಜನ್ಮದಿನಾಂಕದ ಪ್ರಕಾರ 2024 ನವೆಂಬರ್ 13ರಂದು ನಿವೃತ್ತಿ ಹೊಂದಿದ್ದಾರೆ. ಆದರೆ, ಗ್ರಾಪಂ ವತಿಯಿಂದ ಅವರಿಗೆ ಪ್ರತಿ ತಿಂಗಳು 18,243 ರೂ.ನಂತೆ ಒಟ್ಟು ಪ್ರಸಕ್ತ ವರ್ಷದ ಆಗಸ್ಟ್ ಸೇರಿ ತಿಂಗಳು 9 ತಿಂಗಳು ಸಂಬಳ ಪಾವತಿಸಲಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒ ಶಾಂತಿನಾಥ ನ್ಯಾಮಗೌಡ್ರ ಅವರನ್ನು ವಿಚಾರಿಸಿದಾಗ ‘ಆತನ ಆಧಾರ್ ಕಾಡ್ ೯ನಲ್ಲಿ ಜನ್ಮದಿನಾಂಕ ಎರಡು ರೀತಿಯಲ್ಲಿದೆ. ಆದ್ದರಿಂದ ಆತನಿಗೆ ನಿವೃತ್ತಿಯಾಗಿಲ್ಲ. ಈ ಬಗ್ಗೆ ಆತ ನ್ಯಾಯಾಲಯದ ಮೋರೆ ಹೋಗಿದ್ದಾನೆ’ ಎಂದು ಪ್ರತಿಕ್ರಿಯಿಸಿದರು.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.