ರಾಣೆಬೇನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರದಲ್ಲಿ ಸೆಪ್ಟೆಂಬರ್ 14 ರಂದು ರವಿವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪ್ರಧಾನ ಸಮಾರಂಭ ಮೃತುಂಜಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ನಾಗರಾಜ ನೆಲವಾಗಲ ಹೇಳಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯಸಂಘಟನೆಯಿಂದ ಬೆಂಗಳೂರು ನಗರದಲ್ಲಿ ಮಾತ್ರ ಇಂತಹ ಸಮಾವೇಶ ಆಯೋಜಿಸುತ್ತಾ ಬರಲಾಗುತ್ತಿತ್ತು. ತಾಲೂಕಿನ ಮತ್ತು ಜಿಲ್ಲೆಯ ಶಿಕ್ಷಕರ ಸಮುದಾಯದ ಓತ್ತಾಸೆ, ಅಪೇಕ್ಷೆ ಕಾರಣದಿಂದಾಗಿ ರಾಜ್ಯ ಸಂಘಟನೆ ಅಧ್ಯಕ್ಷರಾದ ಎನ್.ರಾಜ ಗೋಪಾಲ್ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂತಹ ಸಮಾವೇಶವೂ ನಡೆಯಬೇಕು ಎನ್ನುವ ಸದೀಚ್ಛತೆಯಂತೆ ಹಾವೇರಿ ಜಿಲ್ಲೆಗೆ ಪ್ರಥಮ ಆದ್ಯತೆ ಸಿಕ್ಕಿದೆ ಎಂದರು.
ಭವಿಷ್ಯದ ದಿವಸಗಳಲ್ಲಿ ಇಂತಹ ಸಮ್ಮೇಳನಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಥವಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿವೆ ಇದರಿಂದಾಗಿ ಪರಸ್ಪರ ಶಿಕ್ಷಕರ ಪರಿಚಯ ಮತ್ತು ಸಮಾವೇಶದ ಮೂಲಕ ಮತ್ತಷ್ಟು ಭಾವೈಕ್ಯತೆ ಬೆಸೆಯಲು ಸಾಧ್ಯವಾಗಲಿದೆ ಎಂದರು.
ಅದ್ದೂರಿ ಸಮಾವೇಶ ನಡೆಸಲು ಈಗಾಗಲೇ, ರಾಜ್ಯ ಸಂಘಟನೆಯ ಮಾರ್ಗದರ್ಶನದಲ್ಲಿ ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ಸಂಘಟನೆಯ ಗಣ್ಯರು ನಿರಂತರ ಶ್ರಮಿಸುತ್ತಿದ್ದಾರೆ ಇದರಿಂದಾಗಿ ಈ ಸಮ್ಮೇಳನವು ನಾ ಭೂತೋ, ನಾ ಭವಿಷ್ಯತೋ ಎನ್ನುವ ರೀತಿಯಲ್ಲಿ ನಡೆಯುವ ವಿಶ್ವಾಸ ನಮ್ಮೆಲ್ಲರದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮತ್ತು ತಾಲೂಕ ಸಂಘದ ಮುಖಂಡರಾದ ಮಾಲತೇಶ್ ಎಂ, ಎಸ್.ಹೆಚ್. ಪಾಟೀಲ್, ಮಾರುತಿ ಲಮಾಣಿ, ಬಸವರಾಜ ನಾಯಕ್, ಎಮ್ ಎಸ್ ಪಾಟೀಲ್, ಎಸ್. ಸಿ. ಹಿರೇಮಠ, ಅಹಮ್ಮದ್ ಖತಿಬ್, ಚಂದ್ರಶೇಖರ ಗ್ಯಾನಗೌಡ್ರ, ಬಸವರಾಜ ಶಾಮನೂರ, ಮಧು ಅಳಲಗೇರಿ, ಸುಧಾ ಕೋಟಿಹಾಳ, ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*