ಹಾವೇರಿ: ರಾಣೆಬೆನ್ನೂರಿನಲ್ಲಿ ಕಳಪೆ ಬೀಜ ಮಾರಾಟ ಮಾಡಿದವರ ವಿರುದ್ಧ ಇನ್ನೂ ಏಕೆ ಚಾರ್ಜ್ ಶೀಟ್ ಹಾಕಿಲ್ಲ. 90ದಿನದೊಳಗೆ ಚಾರ್ಜ್ ಶೀಟ್ ಹಾಕಬೇಕು ಎಂಬ ನಿಯಮ ಇದ್ದರೂ ಇನ್ನೂ ಹಾಕಿಲ್ಲ, ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಎಸ್ಪಿ ಹಾಗೂ ಜಂಟಿ ಕೃಷಿ ನಿರ್ದೇಶಕರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.
ಇಲ್ಲಿಯ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸಚಿವರು ವಿಷಯ ಪ್ರಸ್ತಾಪಿಸಿದ ವೇಳೆ ಎಸ್ಪಿ ಹಾಗೂ ಜಂಟಿ ಕೃಷಿ ನಿರ್ದೇಶಕರು ಇಬ್ಬರೂ ಇನ್ನೂ ದಾಖಲಾತಿ ಪರಿಶೀಲನೆ ಹಂತದಲ್ಲಿದೆ ಎಂದಾಗ ಸಚಿವರು ಗರಂ ಆಗಿ ಕಿಡಿಕಾರಿದರು. ಬಳಿಕ ಕೆಲಕಾಲ ಸಮಯ ಪಡೆದು ಪ್ರತಿಕ್ರಿಯಿಸಿದ ಎಸ್ಪಿ ಯಶೋಧಾ, ರಾಣೆಬೆನ್ನೂರಿನಲ್ಲಿ ಮಾರಾಟ ಮಾಡಿದ ನಿಸರ್ಗ ಕಂಪನಿಯ ಬೀಜಗಳನ್ನು ಧಾರವಾಡ ಲ್ಯಾಬ್ಗೆ ಕಳುಹಿಸಲಾಗಿತ್ತು. ಅಲ್ಲಿಂದ ಬೀಜಗಳು ಕಳಪೆ ಎಂಬ ದೃಢಪಟ್ಟಿದೆ. ಅವರ ವಿರುದ್ಧ ಎರಡು ದಿನದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಲಿದೆ ಎಂದರು.
*ಆಗ ಪ್ರತಿಕ್ರಿಯಿಸಿದ ಶಾಸಕ ಪ್ರಕಾಶ ಕೋಳಿವಾಡ, ನಕಲಿ ಬೀಜ ಮಾರಾಟ ಮಾಡಿದ್ದಾರೆ ಎಂದು ದೃಢಪಟ್ಟ ಬಳಿಕವೂ ಏಕೆ ಆ ಅಂಗಡಿಗಳ ಬಾಗಿಲು ತೆರೆಯಲು ಅವಕಾಶ ಕೊಟ್ಟಿದ್ದೀರಿ. “ಶಾಸಕರು ಡೀಲ್ ಮಾಡಿಕೊಂಡು ಅಂಗಡಿಗಳ ಬಾಗಿಲು ತೆಗೆಸಿದ್ದಾರೆಂದು’ ರಾಣೆಬೆನ್ನೂರಿನಲ್ಲಿ ಸುದ್ದಿ ಹರದಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.*
ಆಗ ಕೃಷಿ ಜೆಡಿ ಅವರು ಬಾಗಿಲು ತೆರೆಯಲು ಡಿಸಿ ಅವರು ಆದೇಶ ಮಾಡಿದ್ದಾರೆ ಎಂದರು. ಆಗ ಡಿಸಿಯವರು ನಾನು ಬಾಗಿಲು ತೆರೆಯಿರಿ ಎಂದು ಆದೇಶಿಸಿಲ್ಲ ಎಂದರು. ಆಗ ಪ್ರತಿಕ್ರಿಯಿಸಿದ ಸಚಿವರು, ಕಳಪೆ ಬೀಜ ಮಾರಾಟ ಮಾಡಿದ್ದಾರೆ ಎಂದು ದೃಢಪಟ್ಟಿರುವ ಅಂಗಡಿಗಳನ್ನು ಇವತ್ತೇ ಬಂದ್ ಮಾಡಿಸಿ, ರಾಜ್ಯಮಟ್ಟದ ಜಾಗೃತ ದಳದ ಅಧಿಕಾರಿಗಳನ್ನು ಕರೆಸಿ ಚಚಿರ್ಸಿ, ಕಳಪೆ ಬೀಜ ಮಾರಾಟ ಮಾಡಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
More Stories
ಅಕ್ರಮ ಸಂಬಂಧಕ್ಕೆ ಮುಗ್ಧ ಕಂದಮ್ಮನ್ನು ಕೊಂದ ದುರುಳ ಹೆತ್ತ ತಾಯಿ..
ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ