ರಾಣೆಬೇನ್ನೂರು: ನಗರದ ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ತಾಲೂಕು ಆಡಳಿತಾಧಿಕಾರಿ ಆರ್.ಎಚ್.ಭಾಗವಾನ ಗೈರಾದ ಕಾರಣ ಅವರಿಗೆ ನೋಟಿಸ್ ನೀಡುವಂತೆ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ.ಪುನೀತ್ ಬಿ.ಆರ್ ಹೇಳಿದರು.
ತಾಲೂಕಿನ ವಿವಿಧ ಇಲಾಖೆಯ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಸಾಮಾನ್ಯ ಸಭೆಯನ್ನು ಇಂದು ನಿಗದಿ ಮಾಡಲಾಗಿತ್ತು. ಅದರಂತೆ ತಾಪಂ ಅಧಿಕಾರಿಗಳು ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸಭೆಯ ನೋಟಿಸ್ ನೀಡಲಾಗಿತ್ತು. ತಹಸೀಲ್ದಾರ ಕಾರ್ಯಾಲಯಕ್ಕೆ ಸಭೆ ಇರುವುದನ್ನು ತಿಳಿಸಲಾಗಿತ್ತು. ಆದರೆ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಜರಿದ್ದರು ಸಹ ತಹಸೀಲ್ದಾರ ಮಾತ್ರ ಸಭೆಯಿಂದ ಗೈರಾದ ಕಾರಣ ಉಪ ಕಾರ್ಯದರ್ಶಿಗಳು ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
21 ಬಾಲ ಗರ್ಭಿಣಿಯರು… 2024-25 ನೇ ಸಾಲಿನಲ್ಲಿ ಸುಮಾರು ಇಪ್ಪತ್ತೊಂದು ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ ಎಂಬ ಆತಂಕದ ಮಾಹಿತಿ ಹೊರಬಿದ್ದಿತು. ಇದನ್ನು ಗಮನಿಸಿದ ಆಡಳಿತಾಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರಕರಣ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲು ಹೇಳಿದರು.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”