ರಾಣೆಬೇನ್ನೂರು: ಬಿಜೆಪಿ ಪಕ್ಷ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಮೋಸ ಮಾಡಿದೆ ಆಗಾಗಿ ಎಲ್ಲಾ ಮುಖಂಡರ ಕಾರ್ಯಕರ್ತರ ಅಭಿಪ್ರಾಯ ಮೇರೆಗೆ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೆನೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.
ರಾಣೆಬೇನ್ನೂರು ನಗರದಲ್ಲಿ ಭಾನುವಾರ ಆರ್.ಶಂಕರ್ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕರ್ತರ ಹಾಗೂ ತಾಲೂಕಿನ ಹಿರಿಯ ಮುಖಂಡರ ಸಭೆಯಲ್ಲಿ ಈ ನಿರ್ಣಯವನ್ನು ಘೋಷಣೆ ಮಾಡಿದರು.
ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದ ಜನರು 2018 ರಲ್ಲಿ ನನಗೆ ಆಶೀರ್ವಾದ ಮಾಡುವ ಮೂಲಕ ನನ್ನನ್ನು ಪಕ್ಷೇತರ ಶಾಸಕರನ್ನಾಗಿ ಆಯ್ಕೆ ಮಾಡಿದರು. ಆದರೆ ನಾನು ಶಾಸಕನಾದ ಮೇಲೆ ಕ್ಷೇತ್ರದ ಅಭಿವೃದ್ದಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಮಿಶ್ರ ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡಿದೆ. ನಂತರ ರಾಜಕೀಯ ವಿದ್ಯಮಾನಗಳಿಂದ ಬಿಜೆಪಿ ಪಕ್ಷ ನನ್ನ ಮನೆಯ ಬಾಗಿಲಿಗೆ ಬಂದು ಕೈಕಾಲು ಹಿಡಿದು ಕರೆದುಕೊಂಡು ಹೋದರು. ನಂತರ ನನಗೆ ಯಾವುದೇ ಸ್ಥಾನ ಮಾನಗಳನ್ನು ಸರಿಯಾಗಿ ನೀಡದೆ ಬಿಜೆಪಿ ಪಕ್ಷವು ನನ್ನನ್ನು ಬಹಳ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವ ಮೂಲಕ ನನ್ನ ರಾಜಕೀಯ ಜೀವನವನ್ನೇ ಹಾಳು ಮಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚು ರಾಜಕೀಯ ನೋವು ಅನುಭವಿಸಿದ್ದೇನಿ. ಅಲ್ಲದೆ ನನ್ನ ಹಿಂದೆ ಬಂದಂತಹ ಕಾರ್ಯಕರ್ತರಿಗೆ ಸರಿಯಾದ ರಾಜಕೀಯ ನೆಲೆ ಹಾಗೂ ಸಹಾಯ ಮಾಡಲು ಆಗಲಿಲ್ಲ ಎಂದು ತುಂಬಿದ ಸಭೆಯಲ್ಲಿ ಕಣ್ಣೀರು ಹಾಕಿದರು.
ಈಗ ಲೋಕಸಭಾ ಚುನಾವಣಾ ಎದುರಾಗಿದ್ದು ನನ್ನ ರಾಜಕೀಯ ಜೀವನವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಸ್ಥಳೀಯ ಶಾಸಕರು ಪಕ್ಷಕ್ಕೆ ಸೇರ್ಪಡೆಯಾಗಲು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಒಂದು ವಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವೆ ಎಂದರು.
ಸಭೆಯಲ್ಲಿ ಮುಖಂಡರಾದ ರಾಜು ಅಡಿವೆಪ್ಪನವರ, ರತ್ನಾಕರ್ ಕುಂದಾಪುರ, ಷಣ್ಮುಖಪ್ಪ ಕಂಬಳಿ, ಶಿವಣ್ಣ ಮಣೇಗಾರ, ನೂರುಲ್ಲಾ ಖಾಜಿ, ಹಬೀಬ್ಉಲ್ಲಾ ಕಂಬಳಿ, ರಾಜು ಸುಣಗಾರ, ಪ್ರಭು ಬೇಲೂರು, ಉಮೇಶ್ ಕೇಂಪಹಾಲಪ್ಪನವರ, ಶಿವು ಕಂಬಳಿ, ಮಂಜಯ್ಯ ಚಾವಡಿ, ನಾಗರಾಜ ಪೋಲಿಸಗೌಡ್ರು, ಭೀಮಪ್ಪ ಅರಳಿಕಟ್ಟಿ, ನಾಗರಾಜ ಆಡಿನವರ ಸೇರಿದಂತೆ ನೂರಾರು ಕಾರ್ಯಕರ್ತರ ಭಾಗಿಯಾಗಿದ್ದರು.
ಬಾಕ್ಸ್…
ಮಾಜಿ ಸಿಎಂ ಸೋಲಿಸುವುದು ನಮ್ಮ ಕೆಲಸ.
ಶಾಸಕರಾದ ಸಮಯದಲ್ಲಿ ಮನೆಯ ತನಕ ಬಂದು ನನ್ನನ್ನು ಕರೆದುಕೊಂಡು ಹೋದವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು. ಅಲ್ಲದೇ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೆ ತಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಿಸಿದ್ದು ಇದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಈಗ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಈಗ ನಾನು ಏನು ಎಂಬುದನ್ನು ಅವರಿಗೆ ತೋರಿಸಿಕೋಡಬೇಕಾಗಿದೆ ಆದ ಕಾರಣ ಕಾರ್ಯಕರ್ತರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಆರ್.ಶಂಕರ್ ಅವರ ಶಕ್ತಿ ಏನು ಎಂಬುದನ್ನು ಗೊತ್ತು ಮಾಡಬೇಕು ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.