ರಾಣೆಬೆನ್ನೂರ: ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಇಲ್ಲಿಯ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ಅವರಿಂದ ಮಾರಕಾಸ್ತ್ರ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡ ಟನೆ ಇಲ್ಲಿಯ ಎರೇಕುಪ್ಪಿ ರಸ್ತೆಯ ಬೈಪಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ನಗರದ ದರ್ಗಾ ಮಸೀದಿ ಹತ್ತಿರದ ಗವಾರದವರ ಓಣಿಯ ನಿವಾಸಿ ಬಾರಕ್ ಹುಸೇನ ಬ್ಯಾಡಗಿ (22), ಇಸ್ಲಾಂಪುರ ಓಣಿಯ ನಿವಾಸಿ ಅಹ್ಮದ್ಸಲಿಂ ಮಹ್ಮದ್ರಫೀಕ್ ಹಾವೇರಿ (24), ದಾವಣಗೆರೆಯ ಆರ್ಟಿಒ ಕಚೇರಿ ಹತ್ತಿರದ ನಿವಾಸಿ ಸೈಯದ್ (ಡಾನ್ ಶೇರು) ಸೈಯದ್ ಅಹ್ಮದ್ (29) ಬಂಧಿತ ಆರೋಪಿತರು. ಇವರಿಂದ ಕೃತ್ಯ ಎಸಗಲು ತಂದಿದ್ದ ಮಾರಕಾಸ್ತ್ರ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು ಮೋಜು ಮಸ್ತಿಗಾಗಿ ಹಣ ಮಾಡಲು ಹೆದ್ದಾರಿಯಲ್ಲಿ ಬರುವ ಕಾರು ಅಥವಾ ಬೈಕ್ಗಳನ್ನು ತಡೆದು ಹಣ ವಸೂಲಿ ಮಾಡಲು ಹೊಂಚು ಹಾಕಿ ಕುಳಿತ್ತಿದ್ದರು. ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿದ್ದ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ರೌಂಡ್ ತಿರುಗುತ್ತಿದ್ದಾಗ ಆರೋಪಿಗಳನ್ನು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ