ರಾಣೆಬೇನ್ನೂರು: ತೀವ್ರ ಕುತೂಹಲ ಮೂಡಿಸಿದ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಹುತೇಕ ಕಾಂಗ್ರೆಸ್ ಹಾಗೂ ಕೆಪಿಜೆಪಿ ಮೈತ್ರಿ ಯಶಸ್ವಿಯಾಲಿದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.
ಹೌದು 37( ಶಾಸಕ ಹಾಗೂ ಸಂಸದ) ಜನ ಸದಸ್ಯರು ಬೆಂಬಲ ಹೊಂದಿರುವ ನಗರಸಭೆಗೆ ಅಧಿಕಾರಕ್ಕೆ ಏರಲು 18 ಸದಸ್ಯರ ಬಹುಮತ ಬೇಕಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಒಂಬತ್ತು ಜನ ಹಾಗೂ ಆರ್.ಶಂಕರ್ ಬೆಂಬಲಿತ ಕೆಪಿಜೆಪಿ ಪಕ್ಷದ ಒಂಬತ್ತು ಜನರು ಹಾಗೂ ಶಾಸಕ ಪ್ರಕಾಶ ಕೋಳಿವಾಡರ ಒಂದು ಮತ ಸೇರಿಸಿದರೆ ಒಟ್ಟು 19 ಜನ ಆಗಲಿದ್ದಾರೆ. ಈ ಹಿನ್ನೆಲೆ ಬಹುಮತ ಬಂದರೆ ಕಾಂಗ್ರೆಸ್ ಪಕ್ಷದ ಚಂಪಕಾ ಬೀಸಲಹಳ್ಳಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಪಿಜೆಪಿ ಪಕ್ಷದ ನಾಗರಾಜ ಪವಾರ ಆಯ್ಕೆಯಾಗಬಹದು ಎಂದು ಪಕ್ಷದ ಮೂಲಗಳಿಂದ ಬಲ್ಲ ಮಾಹಿತಿ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.