ರಾಣೆಬೇನ್ನೂರು: ಜಮೀನಿನ ದಾರಿ ಸಂಬಂಧ ಎರಡು ಕುಟುಂಬದ ನಡುವೆ ನಡೆದ ಹೊಡೆದಾಟದಲ್ಲಿ ಒರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಗ್ರಾಮದ ಕರಬಸಪ್ಪ ಗೋವಿಂದಪ್ಪ ಪಾಟೀಲ (55) ಕೊಲೆಯಾದ ವ್ಯಕ್ತಿ.
ಮಾಳನಾಯಕನಹಳ್ಳಿ ಗ್ರಾಮದ ವಸಂತ ಹನುಮಂತ ಹಿರೇಬಿದರಿ ಮತ್ತು ಕರಬಸಪ್ಪ ಪಾಟೀಲರ ಜಮೀನಿಗೆ ಹೋಗುವ ದಾರಿ ಸಂಬಂಧ ಗಲಾಟೆ ನಡೆದಿದೆ.
ಈ ಸಮಯದಲ್ಲಿ ವಸಂತ ಹಿತ್ತಲಮನಿ, ಹೊಳಬಸಪ್ಪ ಹಿರೇಬಿದರಿ, ಮಧು ಹಿತ್ತಲಮನಿ ಹಾಗೂ ಪುಷ್ಪಾ ಹಿತ್ತಲಮನಿ ಎಂಬುವರು ಕರಬಸಪ್ಪ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ದೂಡಿದ್ದಾರೆ. ಇದರಿಂದ ಕರಬಸಪ್ಪ ಪಾಟೀಲ್ ಅವರಿಗೆ ತಲೆಗೆ ಪೆಟ್ಟು ಬಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರ ಪ್ರಕರಣ ದಾಖಲಿಸಿದ್ದಾರೆ.
ಹಲಗೇರಿ ಪೋಲಿಸರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
More Stories
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”
ಯಾವ ಸಮಾಜಕ್ಕೂ, ಜಾತಿಗೂ ತಾರತಮ್ಯ ಮಾಡಲ್ಲ ಶಾಸಕ ಪ್ರಕಾಶ ಕೋಳಿವಾಡ,