ರಾಣೆಬೇನ್ನೂರು: ಕಾಮಗಾರಿಯ ಗುಣಮಟ್ಟವನ್ನು ಇಂಜನಿಯರಗಳು ಹಾಗೂ ಗುತ್ತಿಗೆದಾರರು ಕಾಪಾಡಿಕೊಂಡು ಮಾತ್ರ ಆ ಕಾಮಗಾರಿ ಸಾರ್ವಜನಿಕರಿಗೆ ಅನಕೂಲವಾಗುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲೂಕಿನ ಕುಪ್ಪೆಲೂರು ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕೆ ಆರ್ ಡಿ ಐ ಎಲ್ ವತಿಯಿಂದ ಸುಮಾರು ಒಂದೂವರೆ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಇರುವುದರಿಂದ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ಗ್ಯಾರಂಟಿ ಯೋಜನೆ ಜತೆಯಾಗಿ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಅವರು ನೋಡುತ್ತಿಲ್ಲ ಎಂದು ತಿಳಿಸಿದರು.
ಇನ್ನೂ ಕಾಮಗಾರಿ ಬಗ್ಗೆ ಗುತ್ತಿಗೆದಾರರು ಕಾಳಜಿ ವಹಿಸಿ ಅದನ್ನು ಗುಣಮಟ್ಟ ರೀತಿಯಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ಚಾಲನೆ ಸಮಯದಲ್ಲಿ ಮುಖಂಡರಾದ ಯಲ್ಲಪ್ಪರಡ್ಡಿ ರಡ್ಡೇರ, ಕರಬಸಪ್ಪ ಕೂಲೇರ, ಮಂಜನಗೌಡ ಪಾಟೀಲ, ನೀಲಕಂಠಪ್ಪ ಕುಸಗೂರು ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಇತರರು ಹಾಜರಿದ್ದರು..
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ